ಕಿಫ್‌ಬಿ ಮಸಾಲೆ ಬಾಂಡ್ ವ್ಯವಹಾರ: ಮುಖ್ಯಮಂತ್ರಿ, ಮಾಜಿ ಹಣಕಾಸು ಸಚಿವರಿಗೆ ಇ.ಡಿಯಿಂದ ನೋಟೀಸು 

ತಿರುವನಂತಪುರ: ಕೇರಳ ಸರಕಾರದ ಹಣಕಾಸು ಇಲಾಖೆಯ ನಿಯಂತ್ರಣದ ಲ್ಲಿರುವ  ಕಿಫ್‌ಬಿ  ಕೇರಳ ಇನ್‌ಫ್ರಾ ಸ್ಟಕ್ಚರ್ (ಇನ್‌ವೆಸ್ಟ್‌ಮೆಂಟ್ ಬೋ ರ್ಡ್-   ಕೇರಳ ಮೂಲ  ಸೌಕರ್ಯ ಹೂಡಿಕೆ ಮಂಡಳಿ)ಯ ಮಸಾಲೆ ಬಾಂಡ್  ವ್ಯವಹಾರಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್  ಮತ್ತು ಅವರ ನೇತೃತ್ವದ ಒಂದನೇ ಸರಕಾರದ ಅವಧಿಯಲ್ಲಿ ರಾಜ್ಯದ ಹಣಕಾಸು ಸಚಿವರಾಗಿದ್ದ ಥೋಮಸ್ ಐಸಾಕ್, ಕಿಫ್‌ಬಿಯ ಸಿಇಒ ಕೆ.ಎಂ. ಎಬ್ರಹಾಂರಿಗೆ ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ಇ.ಡಿ ಜ್ಯಾರಿ ನಿರ್ದೇಶನಾ ಲಯ) ನೋಟೀಸು ಜ್ಯಾರಿಗೊಳಿಸಿದೆ.

2016ರಲ್ಲಿ ಶೇ. 9.72ರಷ್ಟು ಬಡ್ಡಿದರದಲ್ಲಿ ಲಂಡನ್‌ನ ಸ್ಟೋಕ್ ಎಕ್ಸ್‌ಚೇಂಜ್‌ನಿಂದ ಕಿಫ್‌ಬಿ ಮಸಾಲೆ ಬಾಂಡ್ ಮೂಲಕ 2150 ಕೋಟಿ ರೂ. ಸಾಲ ಪಡೆಯಲಾಗಿತ್ತು.  2019 ಜನವರಿ 17ರಂದು ಮುಖ್ಯಮಂತ್ರಿಯ ವರ ಅಧ್ಯಕ್ಷತೆಯಲ್ಲಿ  ನಡೆದ ಸಭೆಯಲ್ಲಿ ಈ ಮಸಾಲೆ ಬಾಂಡ್‌ಗಾಗಿರುವ ಅಗತ್ಯದ ಕ್ರಮಗಳನ್ನು ಪೂರ್ತೀಕರಿಸುವ ತೀರ್ಮಾನ ಕೈಗೊಳ್ಳಲಾಗಿತ್ತು. ಈ ವ್ಯವಹಾರದಲ್ಲಿ ವಿದೇಶಿ ವಿನಿಯಮ ನಿರ್ವಹಣಾ ಕಾಯ್ದೆ  (ಫಾರಿನ್ ಎಕ್ಸ್‌ಚೇಂಜ್ ಮೆನೇಜ್‌ಮೆಂಟ್ ಏಜೆನ್ಸಿ-ಫೆಮ)ಯ ಹಲವು ನಿಬಂಧನೆ ಗಳನ್ನು ಉಲ್ಲಂಘಿ ಸಲಾಗಿದೆಯೆಂದು ಅದಕ್ಕೆ ಸಂಬಂ ಧಿಸಿ ಸ್ಪಷ್ಟೀಕರಣೆ ನೀಡುವಂತೆ ಮುಖ್ಯಮಂತ್ರಿ ಸೇರಿದಂತೆ ಈ ಮೂವರಿಗೆ ನೋಟೀಸು ಜ್ಯಾರಿಗೊ ಳಿಸಲಾಗಿದೆ. ಇದಕ್ಕೆ ಸಂಬಂಧಿಸಿ ತನಿಖೆಗಾಗಿ ಮಾಜಿ ಹಣಕಾಸು ಸಚಿವ ಥೋಮಸ್ ಐಸಾಕ್‌ರಿಗೆ ಇ.ಡಿ ಈ ಹಿಂದೆ ಎರಡು ಬಾರಿ ನೋಟೀಸು ಜ್ಯಾರಿಗೊ ಳಿಸಿತ್ತು. ಆದರೆ ಥೋಮಸ್ ಐಸಾಕ್ ಇ.ಡಿ ಮುಂದೆ ಹಾಜರಾಗಿರಲಿಲ್ಲ. ಮಾತ್ರವಲ್ಲ ಅವರ ಮತ್ತು ಮುಖ್ಯಮಂತ್ರಿಯವರ ಹೇಳಿಕೆಗಳನ್ನು ದಾಖಲಿಸುವ ಯತ್ನವನ್ನು ಇ.ಡಿ ನಡೆಸಿತ್ತು. ಆದರೂ ಅದೂ ಸಾಧ್ಯವಾಗಲಿಲ್ಲ. ಮಸಾಲೆ ಬಾಂಡ್ ಮೂಲಕ ಪಡೆದ ಹಣವನ್ನು ಮೂಲ ಸೌಕರ್ಯ ಅಭಿವೃದ್ಧಿಗಾಗಿ ವಿನಿಯೋಗಿಸಿದ್ದು ಫೆಮ ಕಾನೂನಿನ ಉಲ್ಲಂಘನೆಯಾಗಿದೆ ಯೆಂದು ಇ.ಡಿ ಹೇಳಿದೆ. ಈ ಬಗ್ಗೆ ದೀರ್ಘ ಕಾಲ ನಡೆಸಿದ ತನಿಖೆಯ ವರದಿಯನ್ನು ಇ.ಡಿ ಅಡ್ಯುಕೇಟಿಂಗ್ ಅಥೋರಿಟಿಗೂ ಇ.ಡಿ ಸಲ್ಲಿಸಿತ್ತು. ಅದರ ಬೆನ್ನಲ್ಲೇ ಇ.ಡಿ ಈಗ ಮುಖ್ಯಮಂತ್ರಿ ಸೇರಿ  ಮೂವರಿಗೆ ಈ ನೋಟೀಸು ಜ್ಯಾರಿಗೊಳಿಸಿದೆ.

ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗೆ ಪ್ರಚಾರ ಆರಂಭಗೊಂಡಿರುವ ವೇಳೆಯಲ್ಲೇ ಇ.ಡಿ ಈ ನೋಟೀಸು ಜ್ಯಾರಿಗೊ ಳಿಸಿದೆ. ಅದು ಸರಕಾರ ಮತ್ತು ಎಡರಂಗಕ್ಕೆ ಸಂಕಷ್ಟ ಸೃಷ್ಟಿಸುವಂತೆ ಮಾಡತೊಡಗಿದೆ ಮಾತ್ರವಲ್ಲ  ಬಿಜೆಪಿ ಮತ್ತು ವಿಪಕ್ಷದವರು ಇದನ್ನು ಒಂದು ಚುನಾವಣಾ ಪ್ರಚಾರ ಅಸ್ತ್ರವನ್ನಾಗಿ ಎಡರಂಗದ ವಿರುದ್ಧ ಈಗ ಪ್ರಯೋಗಿಸತೊಡಗಿದ್ದಾರೆ.

RELATED NEWS

You cannot copy contents of this page