ಕುಂಬಳೆ: ಶಿರಿಯದಲ್ಲಿ ಟಿಪ್ಪರ್ ಲಾರಿ ಢಿಕ್ಕಿ ಹೊಡೆದು ವ್ಯಕ್ತಿ ಮೃತಪಟ್ಟ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಶಿರಿಯ ಚಾಕಂಡಡಿಯ ಅಕ್ಕರೆ ಮುಹಮ್ಮದ್ (74) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕಳೆದ ಶನಿವಾರ ಮಧ್ಯಾಹ್ನ 12.30 ರ ವೇಳೆ ಮನೆ ಸಮೀಪದಲ್ಲಿ ಅಪಘಾತವುಂ ಟಾಗಿತ್ತು. ಪುತ್ರ ಅಬ್ದುಲ್ ಅಸೀಸ್‌ಗೆ ಹೊಸತಾಗಿ ನಿರ್ಮಿಸುವ ಮನೆ ನೋಡಲು ಮುಹಮ್ಮದ್ ತೆರಳುತ್ತಿದ್ದರು. ಇದೇ ಹಿತ್ತಿಲಿನಲ್ಲಿ ಮಣ್ಣು ಇಳಿಸಲು ಬಂದ ಟಿಪ್ಪರ್ ಲಾರಿ ಮರಳಿ ಹೋಗುತ್ತಿ ದ್ದಾಗ ಮುಹಮ್ಮದ್‌ರಿಗೆ ಢಿಕ್ಕಿ ಹೊಡೆದಿತ್ತು. ಬಳಿಕ ಆ ಲಾರಿ ನಿಲ್ಲಿಸದೆ ಪರಾರಿಯಾಗಿದೆ. ಶಬ್ದ ಕೇಳಿ ತಲುಪಿದ ನಿರ್ಮಾಣ ಕಾರ್ಮಿಕರು ಹಾಗೂ ನಾಗರಿಕರು ಸೇರಿ ಮುಹಮ್ಮದ್‌ರನ್ನು ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ವಳಯಂ ಜುಮಾ ಮಸೀದಿ ಪರಿಸರದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಅಪಘಾತಕ್ಕೆ ಸಂಬಂಧಿಸಿ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಮೃತರು ಪತ್ನಿ ಆಯಿಷ, ಇತರ ಮಕ್ಕಳಾದ ಅಬೂಬಕ್ಕರ್ ಸಿದ್ದಿಕ್, ಅಬ್ದುಲ್ ಸಲಾಂ, ಅಬ್ದುಲ್ ಲತೀಫ್, ನಿಯಾಸ್, ಸೊಸೆಯಂದಿರಾದ ಫಾತಿಮ, ವಫಿಯ, ಮಸೂದ, ಮರಿಯ ಹಾಗೂ ಸಹೋದರ- ಸಹೋದರಿಯರ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







