ಬಿಎಂಎಸ್ ಕಾರ್ಯಕರ್ತ ಬಿ.ಟಿ.ವಿಜಯನ್ ಕೊಲೆ ಪ್ರಕರಣ: 25 ವರ್ಷಗಳ ಬಳಿಕ ಸೆರೆಗೀಡಾದ ಆರೋಪಿಗೆ ರಿಮಾಂಡ್

ಕಾಸರಗೋಡು: 15 ವರ್ಷಗಳ ಹಿಂದೆ ಕಾಸರಗೋಡಿನ ಬಿಎಂಎಸ್ ಕಾರ್ಯಕರ್ತನನ್ನು ಇರಿದು ಕೊಲೆ ಗೈದ ಪ್ರಕರಣದಲ್ಲಿ ಸೆರೆಗೀಡಾದ ಆರೋಪಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಕಾಸರಗೋಡು ಮೀಪು ಗುರಿಯ ಬಿ.ಟಿ. ವಿಜಯನ್ ಎಂಬ ವರನ್ನು ಕೊಲೆಗೈದ ಪ್ರಕರಣದಲ್ಲಿ ಸೆರೆಗೀಡಾದ ಇಕ್ಕು ಯಾನೆ ಅರಿಕ್ಕಾಡಿ ಬನ್ನಂಗುಳದ ಮೊಹಮ್ಮದ್ ಇಕ್ಬಾಲ್ ಎಂಬಾತನಿಗೆ ರಿಮಾಂಡ್ ವಿಧಿಸಲಾಗಿದೆ.

೨೫ ವರ್ಷಗಳ ಹಿಂದೆ ಬಿ.ಟಿ. ವಿಜಯನ್‌ರನ್ನು ಕೊಲೆಗೈದ ಸಂಬಂಧ ಕುಂಬಳೆ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ಮೊಹಮ್ಮದ್ ಇಕ್ಬಾಲ್  ಆರೋಪಿ ಯಾಗಿದ್ದಾನೆ. ಆರೋಪಿಯಾಗುವು ದರೊಂದಿಗೆ ಈತ ವಿದೇಶಕ್ಕೆ ಪರಾರಿ ಯಾಗಿದ್ದನು. ಬಳಿಕ ಅಲ್ಲಿ ಬೇರೊಂದು ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ದುಬೈಯ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿ ದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಶಿಕ್ಷೆ ಕಾಲಾವಧಿ ಪೂರ್ಣಗೊಂಡು ಊರಿಗೆ ಬಂದ ಕೂಡಲೇ ಕುಂಬಳೆ ಪೊಲೀಸ್ ಹಾಗೂ ಎಎಸ್‌ಪಿಯ ಸ್ಕ್ವಾಡ್ ಸೇರಿ ಅತೀ ಸಾಹಸಿಕವಾಗಿ ಆರೋಪಿಯನ್ನು ಆರಿಕ್ಕಾಡಿಯಿಂದ ಸೆರೆಹಿಡಿಯಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ವಿ. ವಿಜಯಬಾಸ್ಕರ್ ರೆಡ್ಡಿಯವರ ನಿರ್ದೇಶ ಪ್ರಕಾರ ಎಎಸ್‌ಪಿ ಡಾ. ನಂದಗೋಪನ್‌ರ ಮೇಲ್ನೋಟದಲ್ಲಿ ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಮುಕುಂದನ್ ಟಿ.ಕೆ. ನೇತೃತ್ವದಲ್ಲಿ ಸ್ಕ್ವಾಡ್ ಸದಸ್ಯರಾದ ಎಸ್.ಐ. ನಾರಾಯಣನ್ ನಾಯರ್, ಎ.ಎಸ್.ಐ ಶಾಜಿ, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ರಾಜೇಶ್ ಎಂಬಿವರು ಸೇರಿ ಆರೋಪಿಯನ್ನು ಸೆರೆಹಿಡಿದಿದ್ದಾರೆ.

RELATED NEWS

You cannot copy contents of this page