ಅನಧಿಕೃತ ಪ್ರಚಾರ ಬ್ಯಾನರ್ ವಶಪಡಿಸಿ ಮುದ್ರಣ ಸಂಸ್ಥೆಗಳಿಗೆ ದಂಡ

ಕಾಸರಗೋಡು: ತ್ರಿಸ್ತರ ಚುನಾವಣೆಗೆ ಸಂಬಂಧಿಸಿ ವಿವಿಧ ಮುದ್ರಣ ಸಂಸ್ಥೆಗಳಲ್ಲಿ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ನಡೆಸಿದ ತಪಾಸಣೆಯಲ್ಲಿ ಪ್ರಿಂಟಿಂಗ್ ಮೆಟೀರಿಯಲ್‌ಗಳಲ್ಲಿ ಸರಕಾರ ನಿರ್ದೇಶಿಸಿದಂತಹ ಮೊಹರು ಹಾಕದ ಹಿನ್ನೆಲೆಯಲ್ಲಿ ಮುದ್ರಣ ಸಂಸ್ಥೆಯ ಮಾಲಕರಿಗೆ ದಂಡ ಹೇರಲಾಯಿತು. ಜಿಲ್ಲೆಯ ಎರಡು ಮುದ್ರಣ ಸಂಸ್ಥೆಗಳಿಂದ ಪ್ರಿಂಟ್ ಮಾಡಿದ ಬ್ಯಾನರ್‌ಗಳಲ್ಲಿ ಸಂಸ್ಥೆಯ ಹೆಸರು, ವಿಳಾಸ ಮುದ್ರಿಸದಿರುವುದನ್ನು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ 1೦,೦೦೦ ರೂ.ನಂತೆ ದಂಡ ವಿಧಿಸಲಾಯಿತು. ಮುದ್ರಣ ಸಂಸ್ಥೆಗಳ ವಿಳಾಸ ಇಲ್ಲದೆ ನಿಷೇಧಿತ ಉತ್ಪನ್ನಗಳಲ್ಲಿ ಬೋರ್ಡ್‌ಗಳನ್ನು ಮುದ್ರಿಸಿ ಸ್ಥಾಪಿಸಿದ ಅಭ್ಯರ್ಥಿಗಳ ವಿರುದ್ಧವೂ ಕಠಿಣ ಕ್ರಮ ಉಂಟಾಗಲಿದೆ ಎದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯಲ್ಲಿ ತಂಡದ ಮುಖಂಡ ಕೆ.ವಿ. ಮೊಹಮ್ಮದ್ ಮದನಿ, ಕ್ಲೀನ್ ಸಿಟಿ ಮೆನೇಜರ್ ಮಧುಸೂದನನ್, ಟಿ.ಸಿ. ಶೈಲೇಶ್, ವಿ.ಎಂ. ಜೋಸ್, ಐಶ್ವರ್ಯ ಭಾಗವಹಿಸಿದರು.

RELATED NEWS

You cannot copy contents of this page