ಮಂಜೇಶ್ವರ: ಸ್ಥಳೀಯಾಡಳಿತ ಚುನಾವಣೆಯ ಹಿನ್ನೆಲೆಯಲ್ಲಿ ನಡೆಸುತ್ತಿರುವ ಸ್ಪೆಷಲ್ ಡ್ರೈವ್‌ನಂಗವಾಗಿ ವಾಹನ ತಪಾಸಣೆ ವೇಳೆ ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್‌ನಿಂದ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 7.03 ಲಕ್ಷ ರೂ.ವನ್ನು ವಶಪಡಿಸಲಾಗಿದೆ. ಮಂಜೇಶ್ವರ ಎಕ್ಸೈಸ್ ಚೆಕ್‌ಪೋಸ್ಟ್‌ನ ಅಬಕಾರಿ ಅಧಿಕಾರಿಗಳು ವಾಹನ ತಪಾಸಣೆ ನಡೆಸಿದ್ದಾರೆ. ಕೋಟಯಂ ಜಿಲ್ಲೆಯ ಪಾಲ ತಾಲೂಕಿನ ಈರಾಟ್ ಪೇಟೆ ವಿಲ್ಲೇಜ್‌ನ ಹಸನ್ ಕುಂಞಿ ಎಂಬವರ ಪುತ್ರ ತಾಹ ಎಂಬಾತನನ್ನು ಅಬಕಾರಿ ಸರ್ಕಲ್ ಇನ್ಸ್‌ಪೆಕ್ಟರ್ ಶಿಜಿಲ್ ಕುಮಾರ್ ಹಾಗೂ ತಂಡ ಕಸ್ಟಡಿಗೆ ತೆಗೆದಿದೆ. ತಂಡದಲ್ಲಿ ಇನ್ಸ್‌ಪೆಕ್ಟರ್ ಜಿನು ಜೇಮ್ಸ್, ಅಸಿಸ್ಟೆಂಟ್ ಇನ್ಸ್‌ಪೆಕ್ಟರ್ ಶ್ರೀನಿವಾಸನ್, ಪ್ರಿವೆಂಟಿವ್ ಆಫೀಸರ್‌ಗಳಾದ ಪ್ರಜಿತ್ ಕುಮಾರ್, ಮಧು ಇ.ಎನ್, ಸಿವಿಲ್ ಎಕ್ಸೈಸ್ ಅಧಿಕಾರಿಗಳಾದ ನಸಿರುದ್ದೀನ್, ಪ್ರಿಶಿ ಸಹಕರಿಸಿದ್ದರು. ಆರೋಪಿಯನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.







