ಕಾಸರಗೋಡು: ಡೇಟಿಂಗ್ ಆಪ್ ಮೂಲಕ ಪರಿಚಯಗೊಂಡು ೧೬ರ ಹರೆಯದ ಬಾಲಕನನ್ನು ದೌರ್ಜನ್ಯಗೈದ ಘಟನೆಯಲ್ಲಿ ಚಂದೇರ ಪೊಲೀಸರು ಪೋಕ್ಸೋ ಕೇಸೊಂದನ್ನು ದಾಖಲಿಸಿ ದ್ದಾರೆ. ಪಯ್ಯನ್ನೂರು ನಿವಾಸಿಯಾದ ಪ್ರಸಾದ್ ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಈತನನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಇದರೊಂದಿಗೆ 16ರ ಹರೆಯದ ಬಾಲಕ ನೀಡಿದ ದೂರಿನಂತೆ ಚಂದೇರ ಪೊಲೀಸರು ನೋಂದಾಯಿಸಿದ ಪೋಕ್ಸೋ ಪ್ರಕರಣಗಳ ಸಂಖ್ಯೆ 15ಕ್ಕೇರಿದೆ.
ಈ ಮೊದಲು ನೋಂದಾಯಿಸಿದ ಪ್ರಕರಣಗಳಲ್ಲಿ ಆರೋಪಿಗಳಾದ ಬೇಕಲ ಎಇಒ ಆಗಿದ್ದ ಪಡನ್ನಕ್ಕಾಡ್ನ ವಿ.ಕೆ. ಸೈನುದ್ದೀನ್ (52), ಆರ್ಪಿಎಫ್ ನೌಕರ ಪಿಲಿಕ್ಕೋಡ್ ನಿವಾಸಿ ಚಿತ್ರರಾಜ್ (48), ವೆಳ್ಳಚ್ಚಾಲ್ನ ಸುರೇಶ್ (30), ವಡಕ್ಕೇ ಕೊವ್ವಲ್ನ ರೈಯೀಸ್ (40), ತೃಕರಿಪುರ ಕುಂಞಂಹಮ್ಮದ್ (55), ಚಂದೇರದ ಅಪ್ಸಲ್ (23), ಪಡನ್ನಕ್ಕಾಡ್ನ ರಂಸಾನ್ (65), ಚೆಂಬ್ರಕಾನದ ನಾರಾಯಣನ್ (60), ಚೀಮೇನಿಯ ಶಿಜಿತ್ (30) ಎಂಬಿವರನ್ನು ಈ ಮೊದಲೇ ಬಂಧಿಸಲಾಗಿತ್ತು.







