ಕಾಸರಗೋಡಿನ ಹಿಂದುಳಿದ ಅವಸ್ಥೆಗೆ ಎಡ-ಬಲ ಒಕ್ಕೂಟಗಳು ಕಾರಣ- ನಳಿನ್ ಕುಮಾರ್ ಕಟೀಲ್

ಪೈವಳಿಕೆ: ಗಡಿ ಜಿಲ್ಲೆಗಳಾದ  ದಕ್ಷಿಣ ಕನ್ನಡ ಹಾಗೂ ಕಾಸರಗೋಡಿನ ಮಧ್ಯೆ ಅಭಿವೃದ್ಧಿಯಲ್ಲಿ ಭಾರೀ ಅಂತರವಿದೆ ಎಂದು, ಜಿಲ್ಲೆಯ ಹಿಂದುಳಿದಾವಸ್ಥೆಗೆ ಎಡ-ಐಕ್ಯರಂಗದ ಒಕ್ಕೂಟಗಳು ಕಾರಣ ವೆಂದು ನಳಿನ್ ಕುಮಾರ್ ಕಟೀಲ್ ನುಡಿದರು. ಪೈವಳಿಕೆ ಪಂಚಾಯತ್ ಬಿಜೆಪಿ ಕಾರ್ಯಕರ್ತರ ಸಮಾವೇಶ ಹಾಗೂ ಜಯಕೃಷ್ಣನ್ ಮಾಸ್ತರ್ ಬಲಿದಾನ ದಿನಾಚರಣೆಯನ್ನು ಕಾಯರ್‌ಕಟ್ಟೆ ಕುಲಾಲ ಮಂದಿರದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕಳೆದ ಆರು ದಶಕಗಳಿಂದ ಪಕ್ಷವನ್ನು ಬೇಟೆಯಾಡುತ್ತಿದ್ದರೂ ಬಿಜೆಪಿ- ಆರ್‌ಎಸ್‌ಎಸ್ ಕಾರ್ಯ ಕರ್ತರ ಉತ್ಸಾಹವನ್ನು ತಗ್ಗಿಸಲು ಸಿಪಿಎಂಗೆ ಸಾಧ್ಯವಾಗಿಲ್ಲವೆಂದು ಕೆ.ಟಿ. ಜಯಕೃಷ್ಣನ್ ಮಾಸ್ತರ್‌ರಂತಹ ಬಲಿದಾನಿಗಳು ಎಂದೆಂದೂ ಪ್ರೇರಣಾ ಮೂಲಗಳಾಗಿ ಮುಂದುವರಿಯುವರೆಂದು ಅವರು ನುಡಿದರು.

ಬಿಜೆಪಿ ಮಂಜೇಶ್ವರ ಮಂಡಲಾಧ್ಯಕ್ಷ ಆದರ್ಶ ಬಿ.ಎಂ. ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಉತ್ತರ ವಲಯ ಉಪಾಧ್ಯಕ್ಷ ವಿಜಯ ಕುಮಾರ್ ರೈ, ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ, ಜಿಲ್ಲಾ ಕಾರ್ಯದರ್ಶಿ ಮಧು ಎನ್, ಲೋಕೇಶ್ ನೋಂಡ, ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ಕೆ. ಕಯ್ಯಾರ್, ಮಂಡಲ ಪ್ರಧಾನ ಕಾರ್ಯದರ್ಶಿ ಯತಿರಾಜ್, ಪೈವಳಿಕೆ ಪಂ. ನೋರ್ತ್ ಕಾರ್ಯದರ್ಶಿ ಸತ್ಯ ಶಂಕರ ಭಟ್, ಸುಬ್ರಹ್ಮಣ್ಯ ಭಟ್, ಎಂ.ಕೆ. ಭಟ್, ಶಿವರಾಮ ಶೆಟ್ಟಿ ಕೊಜಪ್ಪೆ, ನೋರ್ತ್ ಅಧ್ಯಕ್ಷ ಸತ್ಯಶಂಕರ ಭಟ್ ಮಾತನಾಡಿದರು.

RELATED NEWS

You cannot copy contents of this page