ಕರಂದಕ್ಕಾಡು ರೈಲ್ವೇ ನಿಲ್ದಾಣ ರಸ್ತೆ ದುರಸ್ತಿಗೆ ಇನ್ನೂ ಮುಹೂರ್ತ ಕೂಡಿಬಂದಿಲ್ಲ : ಇಂದಿನಿಂದ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದ್ದರೂ ಚಾಲನೆ ದೊರೆತಿಲ್ಲ

ಕಾಸರಗೋಡು: ನಗರದ ಶೋಚನೀಯಗೊಂಡ ರಸ್ತೆಗಳನ್ನು ಡಾಮರೀಕರಣ ನಡೆಸಿ ಸಂಚಾರಯೋಗ್ಯ ಗೊಳಿಸದ ಹಿನ್ನೆಲೆಯಲ್ಲಿ ಕಾಸರಗೋಡು ತಾಲೂಕು ಬಸ್ ಆಪರೇಟರ್ಸ್ ಫೆಡರೇಶನ್ ನಿನ್ನೆಯಿಂದ ಆರಂಭಿಸಲಿದ್ದ ಮುಷ್ಕರವನ್ನು ಹಿಂತೆಗೆದಿದ್ದರೂ ಇಂದಿನಿಂದ ರಸ್ತೆ ದುರಸ್ತಿಗೊಳಿಸುವ ಭರವಸೆ ಹುಸಿಯಾಗಿದೆ. ಶಾಸಕ ಎನ್.ಎ. ನೆಲ್ಲಿಕುನ್ನು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇಂದಿನಿಂದಕರಂದಕ್ಕಾಡು- ರೈಲ್ವೇ ನಿಲ್ದಾಣ ರಸ್ತೆಯನ್ನು ಡಾರೀಕರಣಗೊಳಿಸುವ ತೀರ್ಮಾನ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆಯಿಂದ ಕಾಸರಗೋಡು ಹಳೆ ಬಸ್ ನಿಲ್ದಾಣಕ್ಕೆ ಸಂಚರಿಸುವ ಬಸ್‌ಗಳ ಸಂಚಾರ ಮೊಟಕುಗೊಳಿಸುವ ಬಗ್ಗೆ ಆರ್‌ಡಿಒಗೆ ಮನವಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಡೆಸಿದ ಮಾತುಕತೆಯಲ್ಲಿ ಇಂದಿನಿಂದ ರಸ್ತೆ ಕಾಮಗಾರಿ ಆರಂಭಿಸುವ ಭರವಸೆ ನೀಡಲಾಗಿತ್ತು. ಆದರೆ ಇಂದು ಕೂಡಾ ಕಾಮಗಾರಿ ಆರಂಭಿಸಿದ ಯಾವುದೇ ಕುರುಹು ಕಂಡು ಬಂದಿಲ್ಲ. ಜನವರಿ ೧೪ರ ಮುಂಚಿತ ರಸ್ತೆ ಕಾಮಗಾರಿ ಮುಗಿಸಿ ಸಂಚಾರಯೋಗ್ಯಗೊಳಿಸದಿದ್ದರೆ ೧೫ರಿಂದ ಮತ್ತೆ ಮುಷ್ಕರ ಹೂಡುವುದಾಗಿ ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್ ಮುನ್ನೆಚ್ಚರಿಕೆ ನೀಡಿದೆ.

ಹೊಸ ಬಸ್ ನಿಲ್ದಾಣದಿಂದ ಹಳೆ ಬಸ್ ನಿಲ್ದಾಣದತ್ತ ಸಾಗುವ ಹಾಗೂ ಕರಂದಕ್ಕಾಡಿನಿಂದ ಟ್ರಾಫಿಕ್ ಜಂಕ್ಷನ್ ವರೆಗಿನ ರಸ್ತೆಗಳಲ್ಲಿ ಹೊಂಡಗಳು ಸೃಷ್ಟಿಯಾಗಿ ಹಲವು ಕಾಲ ಕಳೆದರೂ ಈ ಸಮಸ್ಯೆಗೆ ಪರಿಹಾರ ಕಾಣಲು ಅಧಿಕಾರಿಗಳು ಮುಂದಾಗದಿರುವುದು ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್ ಮುಷ್ಕರಕ್ಕಿಳಿಯಲು ಕಾರಣವಾಗಿದೆ.

RELATED NEWS

You cannot copy contents of this page