ತ್ರಿಸ್ತರ ಚುನಾವಣೆ: ಇಲೆಕ್ಟ್ರೋನಿಕ್ ಮತ ಯಂತ್ರಗಳನ್ನು ಭದ್ರತಾ ಕೊಠಡಿಗೆ ಸ್ಥಳಾಂತರಕ್ಕೆ ಚಾಲನೆ

ಕಾಸರಗೋಡು: ಜಿಲ್ಲಾ ಚುನಾ ವಣೆ ಅಧಿಕಾರಿಯಾದ ಜಿಲ್ಲಾಧಿಕಾರಿ ಕೆ. ಇಂಬಶೇಖರ್‌ರ ನೇತೃತ್ವದಲ್ಲಿ ಕಾಸರಗೋಡು ಕಲೆಕ್ಟರೇಟ್‌ನಲ್ಲಿ ರಾಜ್ಯ ಚುನಾವಣೆ ಆಯೋಗದ ವೇರ್‌ಹೌಸ್ ತೆರೆದು ಸ್ಥಳೀಯಾ ಡಳಿತ ಸಂಸ್ಥೆಯ ಚುನಾವಣೆಗಿರುವ ಇಲೆಕ್ಟ್ರೋನಿಕ್ ಮತದಾನ ಯಂತ್ರ ಗಳ ಸಹಿತದ ಪೋಲಿಂಗ್ ಸಾಮಗ್ರಿ ಗಳನ್ನು ಭದ್ರತಾ ಕೊಠಡಿಯಲ್ಲಿರಿಸುವ ಕ್ರಮಕ್ಕೆ ಚಾಲನೆ ನೀಡಲಾಯಿತು. ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ವೇರ್‌ಹೌಸ್ ತೆರೆಯಲಾಗಿದೆ. ಚುನಾವಣಾ ಡೆಪ್ಯುಟಿ ಕಲೆಸ್ಟರ್ ಗೋಪ ಕುಮಾರ್, ಇವಿಎಂ ನೋಡಲ್ ಆಫೀಸರ್ ಲಿಬು ಎಸ್. ಲಾರೆನ್ಸ್, ಜ್ಯೂನಿಯರ್ ಸುಪರಿಂಟೆಂಡೆಂಟ್ ರಾಜೀವ್, ಸ್ಥಳೀಯಾಡಳಿತ ಸಂಸ್ಥೆಗಳ ಡೆಪ್ಯುಟಿ ಡೈರೆಕ್ಟರ್ ಕೆ.ವಿ. ಹರಿದಾಸ್, ವಿವಿಧ ಮಂಡಲಗಳ ಚುನಾವಣಾ ಅಧಿಕಾರಿಗಳು ಉಪಸ್ಥಿತರಿದ್ದರು.

RELATED NEWS

You cannot copy contents of this page