ಕಾಸರಗೋಡು: ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಯುವತಿ ಹಾಗೂ ಪುತ್ರ ನಾಪತ್ತೆಯಾದ ಬಗ್ಗೆ ದೂರು ನೀಡಲಾಗಿದೆ. ಚಟ್ಟಂಚಾಲ್ ತೆಕ್ಕಿಲ್ ನಿವಾಸಿ ಸುವರ್ಣ (35) ಹಾಗೂ ಪುತ್ರ ಅದ್ವೈತ್ ವಿಷ್ಣು (3) ನಿನ್ನೆ ಮಧ್ಯಾಹ್ನದಿಂದ ನಾಪತ್ತೆಯಾಗಿರುವುದಾಗಿ ಪತಿ ಪಾದೂರು ಹೌಸ್ ನಿವಾಸಿ ಸೋಮಶೇಖರ ಭಟ್ ದೂರು ನೀಡಿದ್ದಾರೆ. ಈ ಬಗ್ಗೆ ಕೇಸು ದಾಖಲಿಸಿ ಮೇಲ್ಪರಂಬ ಪೊಲೀಸರು ತನಿಖೆ ಆರಂಭಿಸಿದ್ದಾರೆ.







