ಮೊಗ್ರಾಲ್‌ನಲ್ಲಿ ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ಆರಂಭ

ಮೊಗ್ರಾಲ್: ಮೊಗ್ರಾಲ್ ಸರಕಾರಿ ವಿಎಚ್‌ಎಸ್‌ಎಸ್‌ನಲ್ಲಿ   ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ವೇದಿಕೆ ಸ್ಪರ್ಧೆಗಳು ನಿನ್ನೆ ಆರಂಭಗೊಂಡಿತು. 

ನಿನ್ನೆ ಬೆಳಿಗ್ಗೆ ನಡೆದ ಸಮಾರಂಭದಲ್ಲಿ ಶಿಕ್ಷಣ ಉಪನಿರ್ದೇಶಕ ಟಿ.ವಿ. ಮಧುಸೂದನನ್ ಧ್ವಜಾರೋಹಣ ನಡೆಸುವ ಮೂಲಕ ವೇದಿಕೇತರ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಂಘಟಕ ಸಮಿತಿ ಪದಾಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು. ವೇದಿಕೇತರ ಸ್ಪರ್ಧೆ ಇಂದು ಸಂಜೆ ಮುಕ್ತಾಯಗೊಳ್ಳಲಿದೆ. ಏಳು ಶಿಕ್ಷಣ ಉಪಜಿಲ್ಲೆಗಳಿಂದಾಗಿ ೫೦೦ರಷ್ಟು ವಿದ್ಯಾರ್ಥಿಗಳು ಈ ಎರಡು ದಿನಗಳ ಸ್ಪರ್ಧಾ ಕಾರ್ಯಕ್ರಮಗಳಲ್ಲಾಗಿ ಭಾಗವಹಿಸುತ್ತಿದ್ದಾರೆ.

ದ್ವಿತೀಯ ಹಂತದಲ್ಲಿ ಡಿ. 29, 30 ಮತ್ತು 31ರಂದು ವೇದಿಕೆ ಸ್ಪರ್ಧೆಗಳು ನಡೆಯಲಿದೆ. ಕಂದಾಯ ಶಾಲಾ ಕಲೋತ್ಸವದಲ್ಲಿ ವೇದಿಕೇತರ ಮತ್ತು ವೇದಿಕೆ ಸ್ಪರ್ಧೆಗಳು ಎರಡು ಹಂತಗಳಲ್ಲಿ ನಡೆಸುವುದು ಜಿಲ್ಲೆಯಲ್ಲಿ ಇದು ಮೊದಲ ಬಾರಿಯಾಗಿದೆ.

ಒಟ್ಟು ಎಂಟು ವೇದಿಕೆಗಳಲ್ಲಾಗಿ ವೇದಿಕೆ ಸ್ಪರ್ಧೆಗಳು ನಡೆಯಲಿದೆ. ಕಲೋತ್ಸವದಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತಿತರರಿಗೆ ಆಹಾರ ಸೌಕರ್ಯವನ್ನ ಏರ್ಪಡಿಸಲಾಗಿದೆ. ಕಲೋತ್ಸವದಲ್ಲಿ ಭಾಗವಹಿಸಲು ಭಾರೀ ಜನಪ್ರವಾಹವೇ ಹರಿದು ಬರತೊಡಗಿದೆ.

ಹೈಯರ್ ಸೆಕೆಂಡರಿ, ಹೈಸ್ಕೂಲ್ ವಿಭಾಗದಲ್ಲಿ ಕಾಸರಗೋಡು ಉಪಜಿಲ್ಲೆ ಮುನ್ನಡೆ

ಮೊಗ್ರಾಲ್: ವೇದಿಕೇತರ ಸ್ಪರ್ಧೆಗಳು ಮುಂದುವರಿಯು ತ್ತಿರುವಾಗ ಮೊದಲ ದಿನ ಹೈಸ್ಕೂಲ್, ಹೈಯರ್ ಸೆಕೆಂಡರಿ ವಿಭಾಗಗಳಲ್ಲಾಗಿ ಕಾಸರಗೋಡು ಉಪಜಿಲ್ಲೆ ಮುನ್ನಡೆಯಲ್ಲಿದೆ. ಎಚ್‌ಎಸ್ ವಿಭಾಗದಲ್ಲಿ 11 ವಿಧ ಸ್ಪರ್ಧೆಗಳು ಪೂರ್ತಿಯಾದಾಗ ೫೫ ಅಂಕ ಗಳಿಸಿ ಕಾಸರಗೋಡು ಉಪಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಬೇಕಲ, ಚೆರುವತ್ತೂರು- 53, ಹೊಸದುರ್ಗ-51, ಕುಂಬಳೆ- 49, ಮಂಜೇಶ್ವರ- 47, ಚಿತ್ತಾರಿಕಲ್- 26 ಅಂಕ ಪಡೆದಿದೆ. ಹೈಯರ್ ಸೆಕೆಂಡರಿ ವಿಭಾಗದ 14 ಸ್ಪರ್ಧೆಗಳು ಮುಗಿದಾಗ ಕಾಸರಗೋಡು ಉಪಜಿಲ್ಲೆ 68 ಅಂಕ ಗಳಿಸಿದೆ. ಚೆರುವತ್ತೂರು-೬೫, ಮಂಜೇಶ್ವರ, ಬೇಕಲ -64, ಹೊಸದುರ್ಗ -63, ಕುಂಬಳೆ -57, ಚಿತ್ತಾರಿಕಲ್ -41 ಅಂಕ ಗಳಿಸಿದೆ.

RELATED NEWS

You cannot copy contents of this page