ಕುಂಬಳೆ: ಹೊಳೆ, ಸಮುದ್ರದಿಂದ ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸು ವುದರ ವಿರುದ್ಧ ಪೊಲೀಸ್ ಕಾರ್ಯಾಚರಣೆ ತೀವ್ರಗೊಂಡಿದ್ದರೂ ಅವರ ಕಣ್ತಪ್ಪಿಸಿ ಹೊಯ್ಗೆ ದಂಧೆ ಕೋರರು ತಮ್ಮ ಚಟುವಟಿಕೆ ತೀವ್ರಗೊಳಿಸಿದ್ದಾರೆ.
ಇದರಂತೆ ನಿನ್ನೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಹೊಯ್ಗೆ ಸಂಗ್ರಹಿಸಲು ಬಳಸುತ್ತಿದ್ದ ಐದು ದೋಣಿಗಳನ್ನು ವಶಪಡಿಸಿ ನಾಶಗೈಯ್ಯಲಾಗಿದೆ. ಶಿರಿಯ ಹೊಳೆಯ ಉಳುವಾರಿನಿಂದ ನಾಲ್ಕು ದೋಣಿಗಳು, ಹೇರೂರಿನಿಂದ ಒಂದು ದೋಣಿಯನ್ನು ವಶಪಡಿಸಲಾಗಿದೆ. ಇವುಗಳನ್ನು ಬಳಿಕ ಜೆಸಿಬಿ ಬಳಸಿ ನಾಶಗೊಳಿಸಲಾಯಿತು. ಹೊಳೆಯಿಂ ದ ಹೊಯ್ಗೆ ಸಂಗ್ರಹ ದಂಧೆ ನಡೆಯುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಕುಂಬಳೆ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಟಿ.ಕೆ. ಮುಕುಂದನ್ ನೇತೃತ್ವದಲ್ಲಿ ಪ್ರೊಬೆಶನರಿ ಎಸ್ಐ ಅನಂತಕೃಷ್ಣನ್ ಆರ್ ಮೆನೋನ್, ಚಾಲಕ ಪ್ರಜೀಶ್ ಕಾರ್ಯಾಚರಣೆ ನಡೆಸಿದ್ದಾರೆ.
ಇದೇ ವೇಳೆ ಅನಧಿಕೃತ ಹೊಯ್ಗೆ ಸಂಗ್ರಹ ಕೆಲಸದಲ್ಲಿ ನಿರತರಾಗುವ ಅನ್ಯರಾಜ್ಯ ಕಾರ್ಮಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಾರ್ಮಿಕರು ವಾಸಿಸುವ ಕ್ವಾರ್ಟರ್ಸ್ಗಳಿಗೆ ದಾಳಿ ನಡೆಸಿ ಹೊಯ್ಗೆ ಸಂಗ್ರಹ ಕೆಲಸದಲ್ಲಿ ಪಾಲ್ಗೊಂಡವರನ್ನು ಪತ್ತೆಹಚ್ಚಿ ಅವರನ್ನು ಊರಿಗೆ ಕಳುಹಿಸಲಾಗು ತ್ತಿದೆ. ಅದೇ ರೀತಿ ಹೊಯ್ಗೆ ಕಡವಿಗೆ ಸ್ಥಳ ಹಾಗೂ ರಸ್ತೆಸೌಕರ್ಯ ಒದಗಿಸುವವರ ವಿರುದ್ಧ ಜಾಮೀನು ರಹಿತ ಕೇಸು ದಾಖಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.







