ಶಾಲಾ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಮದ್ದುಗುಂಡು ಪತ್ತೆ

ಆಲಪ್ಪುಳ: ೮ನೇ ತರಗತಿ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಮದ್ದುಗುಂಡು ಪತ್ತೆಯಾದ ಘಟನೆ ನಡೆದಿದೆ. ಆಲಪ್ಪುಳ ಸಮೀಪ ಕಾರ್ತಿಕಪ್ಪಳ್ಳಿ ಎಂಬಲ್ಲಿನ ಖಾಸಗಿ ಶಾಲೆಯ ೮ನೇ ತರಗತಿ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಮದ್ದುಗುಂಡುಗಳು ಪತ್ತೆಯಾಗಿದೆ. ವಿದ್ಯಾರ್ಥಿಗಳು ಮಾದಕವಸ್ತು ಉಪಯೋಗಿಸುತ್ತಿ ದ್ದಾರೆಯೇ ಎಂದು ತಿಳಿಯಲು ಅಧ್ಯಾಪಕರು ಬ್ಯಾಗ್ ಪರಿಶೀಲಿಸುತ್ತಿದ್ದ ವೇಳೆ ಮದ್ದುಗುಂಡು  ಪತ್ತೆಯಾಗಿದೆ. ಈ ಬಗ್ಗೆ ಶಾಲಾ ಅಧಿಕಾರಿಗಳು ನೀಡಿದ ಮಾಹಿತಿ ಯಂತೆ ಪೊಲೀ ಸರು ತಲುಪಿ ಮದ್ದುಗುಂಡುಗಳನ್ನು ವಶಪಡಿಸಿ ತನಿಖೆ ಆರಂಭಿಸಿದ್ದಾರೆ. ಇದೇ ವೇಳೆ ಟ್ಯೂಶನ್‌ಗೆ ಹೋ ಗುತ್ತಿದ್ದಾಗ ಹಿತ್ತಿಲೊಂದರಿಂದ ಈ ಮದ್ದು ಗುಂಡುಗಳು ಬಿದ್ದು ಸಿಕ್ಕಿರು ವುದಾಗಿ ವಿದ್ಯಾರ್ಥಿ ಪೊಲೀಸರಲ್ಲಿ ತಿಳಿಸಿದ್ದಾನೆ. ಈತನ ಹೇಳಿಕೆ ಸರಿಯೇ ಎಂದು ತಿಳಿಯಲು ಪರಿಶೀಲನೆ ತೀವ್ರಗೊಳಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page