ಕಾಸರಗೋಡು: ಮದ್ರಸ ವಿದ್ಯಾರ್ಥಿಗೆ ಕಾರಿನಲ್ಲಿ ಲಿಫ್ಟ್ ನೀಡಿದ 60 ವರ್ಷ ಪ್ರಾಯದ ವೃದ್ದ ಪ್ರಯಾಣ ಮಧ್ಯೆ ದೌರ್ಜನ್ಯ ಗೈಯ್ಯಲು ಯತ್ನಿಸಿರುವುದಾಗಿ ದೂರಲಾಗಿದೆ. 13ರ ಹರೆಯದ ಬಾಲಕನ ದೂರಿನಂತೆ ಪರಪ್ಪ ನಿವಾಸಿ ರಜಾಕಾ (60) ಎಂಬಾತನ ವಿರುದ್ಧ ವೆಳ್ಳರಿಕುಂಡ್ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ.
ನಿನ್ನೆ ಕೇಸಿಗೆ ಆಸ್ಪದವಾದ ಘಟನೆ ನಡೆದಿದೆ. ಮದ್ರಸ ತರಗತಿ ಮುಗಿಸಿ ಮನೆಗೆ ವಿದ್ಯಾರ್ಥಿ ನಡೆದು ಹೋಗುತ್ತಿದ್ದ. ಈ ಮಧ್ಯೆ ಕಾರಿನೊಂದಿಗೆ ತಲುಪಿದ ರಜಾಕ್ ಬಾಲಕನಿಗೆ ಲಿಫ್ಟ್ ನೀಡಿದ್ದಾನೆ. ಪ್ರಯಾಣ ಮಧ್ಯೆ ಬಾಲಕನನ್ನು ಚುಂಬಿಸಿರುವುದಾಗಿ ಹೇಳಲಾಗುತ್ತಿದೆ. ವಿದ್ಯಾರ್ಥಿ ಮನೆಗೆ ತಲುಪಿ ಈ ಬಗ್ಗೆ ತಿಳಿಸಿದ್ದು, ಬಳಿಕ ಮನೆಮಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.







