ಕುಂಬಳೆ: ಇಲ್ಲಿಗೆ ಸಮೀಪದ ಕೋಟೆಕ್ಕಾರ್ ಎಸ್‌ಸಿ ಕಾಲನಿಯ ಜನಾರ್ದನ (65) ಎಂಬವರು ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ನಿನ್ನೆ ರಾತ್ರಿ ಮನೆಯಿಂದ ಜನಾರ್ದನ ನಾಪತ್ತೆಯಾಗಿದ್ದರು. ಮನೆಯವರು ಹುಡುಕಾಡಿದಾಗ ಮನೆ ಪಕ್ಕದ ಮರದ ರೆಂಬೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಜನಾರ್ದನ ಪತ್ತೆಯಾಗಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಕುಂಬಳೆ ಪೊಲೀಸರು ಈ ಬಗ್ಗೆ ಪ್ರಕರ ಣ ದಾಖಲಿಸಿ ತನಿಖೆ ನಡೆಸಿದರು.
ಮೃತರು ಪತ್ನಿ ಕಮಲಾಕ್ಷಿ, ಮಕ್ಕಳಾದ ಉಷಾ ಕಿರಣ್, ತುಳಸಿ, ಸ್ವಾತಿ, ಶರತ್‌ಕಿರಣ್, ಕೃಷ್ಣ, ಅಳಿಯಂ ದಿರಾದ ಮಣಿಕಂಠನ್, ನಿತಿನ್ ಮತ್ತು ಸಹೋದರ ಮಾಧವ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







