ಯುಡಿಎಫ್ ವಿರುದ್ಧ ಬಂಡುಕೋರರಾಗಿ ಸ್ಪರ್ಧೆ :15 ಅಭ್ಯರ್ಥಿಗಳನ್ನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ವಜಾ; ಸಹಾಯಕರಾದ ಐವರು ನೇತಾರರೂ ಹೊರಕ್ಕೆ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯುವ ಚುನಾವಣೆಯಲ್ಲಿ ಯುಡಿಎಫ್‌ನ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡುಕೋರರಾಗಿ ಸ್ಪರ್ಧಿಸುವ 15 ಅಭ್ಯರ್ಥಿಗಳನ್ನು ಹಾಗೂ ಅವರ ಸಹಾಯಕವಾದ ಐವರು ನೇತಾರರನ್ನು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದ ವಜಾಗೈದಿರುವುದಾಗಿ ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ತಿಳಿಸಿದ್ದಾರೆ. ಈಸ್ಟ್ ಎಳೇರಿ ಪಂಚಾಯತ್‌ನ 1ನೇ ವಾರ್ಡ್‌ನ ಜೈಸನ್ ಥೋಮಸ್, 3ನೇ ವಾರ್ಡ್‌ನ ಜೆಸ್ಸಿ ಟೋಂ, 7ನೇ ವಾರ್ಡ್‌ನ ಜೋನ್ ಪೇಂಡಾನಂ, 9ನೇ ವಾರ್ಡ್‌ನ ಮ್ಯಾಥ್ಯೂ ಸೆಬಾಸ್ಟಿಯನ್,೧೪ನೇ ವಾರ್ಡ್‌ನ ತ್ರೇಸಿಯಮ್ಮ ಟೋಮಿ, ಕಳ್ಳಾರು ಪಂಚಾಯತ್ 10ನೇ ವಾರ್ಡ್‌ನ ಪಿ.ಎಂ. ಬೇಬಿ, ಕುಂಬಳೆ ಪಂಚಾಯತ್ 18ನೇ ವಾರ್ಡ್‌ನ ಸಮೀರ ರಿಯಾಸ್, ಎಣ್ಮಕಜೆ ಪಂಚಾಯತ್‌ನ 14ನೇ ವಾರ್ಡ್‌ನ ಅಬ್ದುಲ್ ಲತೀಫ್, ಬಳಾಲ್ ಪಂಚಾಯತ್ 10ನೇ ವಾರ್ಡ್‌ನ ಸನೋಜ್ ಮ್ಯಾಥ್ಯೂ,ಚೆಂಗಳ ಪಂಚಾಯತ್ 10ನೇ ವಾರ್ಡ್‌ನ ಸಲೀಂ ಎಡನೀರು, ಚೆಮ್ನಾಡ್ ಪಂಚಾಯತ್ 9ನೇ ವಾರ್ಡ್‌ನ ಮಾಧವಿ ಮುಂಡೋಳು, ಚೆರ್ವತ್ತೂರು ಪಂಚಾಯತ್ ೧೬ನೇ ವಾರ್ಡ್‌ನ ಪಿ. ವಿಜಯನ್, ನೀಲೇಶ್ವರ ನಗರಸಭೆಯ 34ನೇ ವಾರ್ಡ್‌ನ ವಿ. ಉಷಾ, ಕಾಸರಗೋಡು ಬ್ಲೋಕ್ ಪಂಚಾಯತ್ ಎರಿಯಾಲ್ ಡಿವಿಶನ್‌ನ ಪರ್ವಿನ್ ಟೀಚರ್, ಮಂಜೇಶ್ವರ ಬ್ಲೋಕ್ ಪಂಚಾಯತ್ ಪುತ್ತಿಗೆ ಡಿವಿಶನ್‌ನ ಶುಕೂರ್ ಕಾನಾಜೆ ಎಂಬಿವರನ್ನು ಹಾಗೂ ಬಂಡುಕೋರ ಅಭ್ಯರ್ಥಿಗಳ ಪರವಾಗಿ ಕಾರ್ಯಾಚರಿಸುವ ಕಳ್ಳಾರಿನ ಸಜಿ ಮಣ್ಣೂರು, ಜೋಶಿ, ಕುಂಬಳೆ ಪಂಚಾಯತ್‌ನ ರಿಯಾಸ್, ಕೇಶವ, ಬಳಾಲ್ ಗ್ರಾಮ ಪಂಚಾಯತ್ನ ಎನ್.ಟಿ. ಮ್ಯಾಥು ಎಂಬಿವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಹೊರ ಹಾಕಲಾಗಿದೆಯೆಂದು ಫೈಸಲ್ ತಿಳಿಸಿದ್ದಾರೆ.

RELATED NEWS

You cannot copy contents of this page