ಕಾಸರಗೋಡು: ಕೇರಳ ಸ್ಟೇಟ್ ಹೌಸಿಂಗ್ ಬೋರ್ಡ್ ವಿದ್ಯಾನಗರದಲ್ಲಿ ನಿರ್ಮಿಸಿದ ಫ್ಲ್ಯಾಟ್ ಸಮುಚ್ಚಯದಿಂದ ಸಾರ್ವಜನಿಕ ಚರಂಡಿಗೆ ಹೋಟೆಲ್ ತ್ಯಾಜ್ಯ ಸಹಿತ ಮಲಿನ ಜಲವನ್ನು ಹರಿಯಬಿಟ್ಟಿರುವುದನ್ನು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಜಿಲ್ಲಾ ಎನ್‌ಫೋರ್ಸ್ ಮೆಂಟ್ ಸ್ಕ್ವಾಡ್ 2೦,೦೦೦ ರೂ. ದಂಡ ಹೇರಿದೆ. ಹೌಸಿಂಗ್ ಕಾಲನಿಯಲ್ಲಿ ವಾಸಿಸುವವರು ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಧಾನ ತೋಡಿಗೆ ಸಂಪರ್ಕಿಸುವ ಚರಂಡಿಗೆ ಮಲಿನ ಜಲವನ್ನು ಹರಿಯಬಿಟ್ಟಿರುವುದನ್ನು ಪತ್ತೆಹಚ್ಚಲಾಗಿದೆ. ಹೌಸಿಂಗ್ ಕಾಲನಿಯಲ್ಲಿ 104 ಕುಟುಂಬಗಳು ವಾಸಿಸುತ್ತಿವೆ. ಚರಂಡಿಗೆ ಹೋಟೆಲ್‌ನ ಮಲಿನ ಜಲ ಹರಿಯುವುದನ್ನು ತಡೆಯಬೇಕೆಂದು, ತ್ಯಾಜ್ಯವನ್ನು ಆವರಣದೊಳಗೇ ಸಂಸ್ಕರಿಸಬೇಕೆಂದು ನಿರ್ದೇಶಿಸಿ ಮುಂದಿನ ಕ್ರಮ ಕೈಗೊಳ್ಳಲು ಪಂಚಾಯತ್‌ಗೆ ಪತ್ರ ನೀಡಿದ್ದಾರೆ.
ಹೈಯರ್ ಸೆಕೆಂಡರಿ ಶಾಲೆಯ ತ್ಯಾಜ್ಯಗಳನ್ನು ಇನ್ಸಿನೇಟರ್‌ನಲ್ಲಿ ಉರಿಸಿರುವುದನ್ನು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಮುಖ್ಯೋಪಾಧ್ಯಾಯನಿಗೆ 5೦೦೦ ರೂ. ದಂಡ ಹೇರಲಾಗಿದೆ. ತಪಾಸಣೆ ತಂಡದಲ್ಲಿ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ಮುಖಂಡ ಕೆ.ವಿ. ಮುಹಮ್ಮದ್ ಮದನಿ, ಸದಸ್ಯರಾದ ಶೈಲೇಶ್ ಟಿ.ಸಿ, ಜೋಸ್ ವಿ.ಎಂ, ಹೆಲ್ತ್ ಇನ್ಸ್‌ಪೆಕ್ಟರ್ ರಶ್ಮಿ ಕೆ. ಭಾಗವಹಿಸಿದರು.







