ದೇಲಂಪಾಡಿ: ಯಾವುದೇ ಪಕ್ಷ ಜಯ ಗಳಿಸಿದರೂ ಅಲ್ಪ ಮೊತ್ತ ಬಹುಮತ ಲಭಿಸುವ ಡಿವಿಶನ್‌ಗಳಲ್ಲಿ ಒಂದಾಗಿದೆ ದೇಲಂಪಾಡಿ ಜಿಲ್ಲಾ ಪಂಚಾಯತ್ ಡಿವಿಶನ್. ಇಲ್ಲಿ ಕಳೆದ ಬಾರಿ ಮುಸ್ಲಿಂ ಲೀಗ್‌ನ ಬಿ. ಶಫೀಕ್ ಜಯಗಳಿಸಿದ್ದು 263 ಮತ ಹೆಚ್ಚುವರಿ ಯಾಗಿ ಲಭಿಸಿಯಾಗಿತ್ತು. ಸಿಪಿಎಂನ ಎ.ಪಿ.ಕುಶಲರಿಗೆ 13,185 ಮತ ಲಭಿಸಿದ್ದು, ಶಫೀಕ್‌ಗೆ 13,448 ಲಭಿಸಿ ಜಯ ಗಳಿಸಿದ್ದರು. ಇದೇ ವೇಳೆ ಬಿಜೆಪಿ ಯ ಎಂ. ಸುಧಾಮ ಗೋಸಾಡರಿಗೆ 9,997 ಮತ ಲಭಿಸಿದೆ. ಈ ಬಾರಿ ಐಕ್ಯರಂಗದಿಂದ ದಲಿತ್ ಲೀಗ್ ಕಾರ್ಯಕರ್ತೆ ಪ್ರೇಮ (38), ಸಿಪಿಎಂ ಪಾಂಡಿ ಲೋಕಲ್ ಸಮಿತಿ ಸದಸ್ಯೆ ಒ. ವತ್ಸಲ (53), ಮಹಿಳಾ ಮೋರ್ಚಾ ಕಾರ್ಯಕರ್ತೆ ಜಿ. ಬೇಬಿ (43) ಸ್ಪರ್ಧಿಸು ತ್ತಿದ್ದು ವಿಜೇತರಾಗುವವರು ಯಾರೆಂಬ ಬಗ್ಗೆ ಕಲ್ಪಿಸಲು ಅಸಾಧ್ಯವಾಗುತ್ತಿದೆ.
ದೇಲಂಪಾಡಿ ಪಂಚಾಯತ್‌ನ 17 ವಾರ್ಡ್‌ಗಳು, ಕಾರಡ್ಕ ಪಂ ಚಾಯತ್‌ನ 14, ಮುಳಿಯಾರು ಪಂಚಾಯತ್‌ನ 8, ಬೆಳ್ಳೂರು ಪಂಚಾ ಯತ್‌ನ 6, ಕುಂಬ್ಡಾಜೆ ಪಂಚಾಯತ್‌ನ 3, ಬೇಡಡ್ಕ ಪಂಚಾಯತ್‌ನ 1 ವಾರ್ಡ್ ಸೇರಿ ಒಟ್ಟು 49 ವಾರ್ಡ್‌ಗಳು ಒಳಗೊಂಡಿರುವುದಾಗಿದೆ ದೇಲಂಪಾಡಿ ಡಿವಿಶನ್. ಕಳೆದ ಚುನಾವಣೆಯಲ್ಲಿ ಮುಳಿಯಾರು ಪಂಚಾಯತ್‌ನ ಐಕ್ಯರಂಗಕ್ಕೆ ಬಹುಮತವಿದ್ದ 8 ವಾರ್ಡ್ ಗಳನ್ನು ಚೆಂಗಳ ಡಿವಿಶನ್‌ಗೆ ಸೇರಿಸಲಾಗಿದ್ದು, ಅದಕ್ಕೆ ಬದಲಾಗಿ ಎಡರಂಗಕ್ಕೆ ಬಹುಮತವಿರುವ ದೇಲಂಪಾಡಿ ಪಂಚಾಯತ್‌ನ ಅಡೂರು ಬ್ಲೋಕ್ ಡಿವಿಶನ್‌ನಲ್ಲಿ ಒಳಗೊಂಡ 8 ವಾರ್ಡ್ ಗಳನ್ನು ದೇಲಂಪಾಡಿ ಡಿವಿಶನ್‌ಗೆ ಸೇರಿಸಲಾಗಿದೆ. ಇದು ಈ ಡಿವಿಶನ್‌ನ ಈ ಬಾರಿಯ ಫಲಿತಾಂಶದಲ್ಲಿ ಪ್ರಧಾನ ಪಾತ್ರ ವಹಿಸಲಿದೆ.
ಮುಳಿಯಾರು ಪಂಚಾಯತ್‌ನ ಕಾನತ್ತೂರು ವಾರ್ಡ್ ಕಳೆದ ಬಾರಿ ಕುತ್ತಿಕ್ಕೋಲ್ ಡಿವಿಶನ್‌ನಲ್ಲಿತ್ತು. ಆದರೆ ಅದನ್ನು ಈ ಬಾರಿ ದೇಲಂಪಾಡಿಗೆ ಸೇರಿಸಲಾಗಿದೆ. ಜೊತೆಗೆ ಬೇಡಡ್ಕ ಪಂಚಾಯತ್‌ನ ವಟ್ಟಂತಟ್ಟ ವಾರ್ಡ್ ಕೂಡಾ ದೇಲಂಪಾಡಿಗೆ ಸೇರಿದೆ. ಒಟ್ಟು ಈಗ ಇರುವ ೪೯ ವಾರ್ಡ್‌ಗಳಲ್ಲಿ ಎಲ್‌ಡಿಎಫ್ 22ರಲ್ಲಿ, ಯುಡಿಎಫ್ 15ರಲ್ಲಿ, ಬಿಜೆಪಿ 11ರಲ್ಲಿ ಜಯ ಗಳಿಸಿದೆ. ಬೆಳ್ಳೂರು ಪಂಚಾಯತ್‌ನಲ್ಲಿ ಹೊಸತಾಗಿ ರೂಪೀಕರಿಸಿದ ೬ನೇ ವಾರ್ಡ್‌ನಲ್ಲಿ ತ್ರಿಕೋನ ಸ್ಪರ್ಧೆಯಿದೆ. 60,889 ಮಂದಿ ಮತದಾರರು ಈ ಡಿವಿಶನ್‌ನಲ್ಲಿದ್ದಾರೆ ಎಂಬ ಬಗ್ಗೆ ಆಯೋಗ ಲೆಕ್ಕ ನೀಡಿದ್ದು, ಇದರಲ್ಲಿ ಅಲ್ಪ ವ್ಯತ್ಯಾಸ ಉಂಟಾಗಲು ಸಾಧ್ಯತೆ ಇದೆ.
2010ರ ಚುನಾವಣೆಯಲ್ಲಿ ಸಿಪಿಎಂನ ಎಂ. ತಿಮ್ಮಯ್ಯ 65 ಮತ ಗಳಿಗೆ ಜಯ ಗಳಿಸಿದ್ದು, 2015ರಲ್ಲೂ ಸಿಪಿಎಂನ ಎ.ಪಿ. ಉಷಾ 548 ಮತಗಳಿಗೆ ಜಯ ಗಳಿಸಿದ್ದಾರೆ. ಆದರೆ 2020ರಲ್ಲಿ ನಡೆದ ಚುನಾವಣೆಯಲ್ಲಿ ಮುಸ್ಲಿಂ ಲೀಗ್‌ನ ಪಿ.ಬಿ. ಶಫೀಕ್ 263 ಮತಗಳಿಗೆ ಜಯಗಳಿಸಿ ಸಿಪಿಎಂನಿಂದ ಈ ಡಿವಿಶನ್‌ನ್ನು ಐಕ್ಯರಂಗಕ್ಕೆ ನೀಡಿದ್ದರು. ಎಡನೀರು ಅಜಕ್ಕೋಡು ನಿವಾಸಿ ಎ. ಪ್ರೇಮ ಈ ಬಾರಿ ಇಲ್ಲಿ ಮುಸ್ಲಿಂ ಲೀಗ್‌ನಿಂದ ಸ್ಪರ್ಧಿಸುತ್ತಿದ್ದು, ಈ ಮಂಡಲವನ್ನು ಮತ್ತೆ ಸ್ವಾಧೀನ ಪಡಿಸಲು ಮಹಿಳಾ ಅಸೋಸಿ ಯೇಷನ್ ಕಾರಡ್ಕ ಏರಿಯಾ ಅಧ್ಯಕ್ಷೆ ಹಾಗೂ ಬ್ಲೋಕ್ ಪಂಚಾಯತ್ ಮಾಜಿ ಸದಸ್ಯೆಯಾದ ಒ. ವತ್ಸಲ ಸಿಪಿಎಂನಿಂದ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಗಾಗಿ ಮಹಿಳಾ ಮೋರ್ಚ ಕಾರ್ಯಕರ್ತೆ, ಕಾಸರಗೋಡು ಸಾರೀಸ್‌ನಲ್ಲಿ ನೇಯ್ಗೆ ಕಾರ್ಮಿಕೆ ಯಾಗಿರುವ ಜಿ. ಬೇಬಿ ಸ್ಪರ್ಧಿಸುತ್ತಿದ್ದಾರೆ.







