ತಿರುವನಂತಪುರ: ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಬಳಿಕ ಬಲವಂತವಾಗಿ ಆಕೆಯ ಗರ್ಭಪಾತ ನಡೆಸಿದ ಪ್ರಕರಣದ ಆರೋಪಿಯಾ ಗಿರುವ ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ಯನ್ನು ತಿರುವನಂತಪುರ ಜಿಲ್ಲಾ ಸೆಶನ್ಸ್ ನ್ಯಾಯಾಲಯ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ರಾಹುಲ್‌ಗೆ ತನಿಖಾ ತಂಡದ ಮುಂದೆ ನೇರವಾಗಿ ಶರಣಾ ಗುವುದಲ್ಲದೆ ಬೇರೆ ದಾರಿ ಇಲ್ಲದಂತಾಗಿದೆ.
ಇದೇ ಸಂದರ್ಭದಲ್ಲಿ ರಾಹುಲ್‌ನ ಪ್ರಾಥಮಿಕ ಸದಸ್ಯತನವನ್ನು ರದ್ದುಪಡಿಸಿ ಕಾಂಗ್ರೆಸ್ ನೇತೃತ್ವ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಿದೆ. ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನೀಡಿದ ನಿರ್ದೇಶ ಪ್ರಕಾರ ಕಳೆದ ಆಗಸ್ಟ್ ೨೧ರಂದು ರಾಹುಲ್ ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದರ ಬೆನ್ನಲ್ಲೇ ಅವರನ್ನು ಈಗ ಕಾಂಗ್ರೆಸ್‌ನಿಂದಲೇ ಉಚ್ಛಾಟಿಸಲಾಗಿದೆ. ಇದರಿಂದಾಗಿ ರಾಹುಲ್‌ಗೆ ರಾಜಕೀಯ ಬೆಂಬಲವೂ ನಷ್ಟಗೊಂಡಂತಾಗಿದೆ. ಲೈಂಗಿಕ ಕಿರುಕುಳದ ಆರೋಪ ಹೊರಿಸಿ ಯುವತಿ ಮುಖ್ಯಮಂತ್ರಿಗೆ ನ.೨೪ರಂದು ನೇರವಾಗಿ ದೂರು ನೀಡಿದ್ದಳು. ಅದರ ಮರುದಿನದಿಂದಲೇ ರಾಹುಲ್ ತಲೆಮರೆಸಿಕೊಂಡಿದ್ದಾರೆ. ಈ ಮಧ್ಯೆ ಅವರು ನಿನ್ನೆ ಹೊಸದುರ್ಗ ಅಥವಾ ಕಾಸರಗೋಡು ನ್ಯಾಯಾಲಯದಲ್ಲಿ ಶರಣಾಗುವ ಸಾಧ್ಯತೆ ಇದೆ ಎಂಬ ವದಂತಿಗಳು ಹುಟ್ಟಿಕೊಂಡಿದ್ದವು. ಇದರಿಂದಾಗಿ ಸುದ್ಧಿಮಾಧ್ಯಮದವರು ಎರಡೂ ನ್ಯಾಯಾಲಯಗಳಲ್ಲಿ ನಿನ್ನೆ ಬೆಳಿಗ್ಗಿನಿಂದ ಸಂಜೆ ತನಕ ಜಮಾಯಿಸಿ ದ್ದರು. ಅಲ್ಲದೆ ಪೊಲೀಸರು ಕೂಡಾ ತೀವ್ರ ನಿಗಾ ಇರಿಸಿದ್ದರು. ರಾಹುಲ್‌ರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ ಬೆನ್ನಲ್ಲೇ ರಾಹುಲ್‌ರ ಕಾರು ಚಾಲಕ ಎಸ್. ಅಲ್ವಿನ್ ಮತ್ತು ಸ್ನೇಹಿತ ಫಸಲ್ ಅಬಾಸ್‌ನನ್ನು ವಿಶೇಷ ತನಿಖಾ ತಂಡ ನಿನ್ನೆ ವಶಕ್ಕೆ ತೆಗೆದುಕೊಂಡಿದೆ. ಇವರಿ ಬ್ಬರನ್ನು ತನಿಖಾ ತಂಡ ತಿರುವನಂ ತಪುರಕ್ಕೆ ತಲುಪಿಸಿ ತೀವ್ರ ವಿಚಾರ ಣೆಗೊಳಪಡಿಸುತ್ತಿದೆ. ರಾಹುಲ್‌ರನ್ನು ಬೆಂಗಳೂರಿಗೆ ತಲುಪಿಸಿದ ಇನ್ನೋರ್ವ ಸ್ನೇಹಿತ ಜೋಸ್ ಎಂಬಾತನನ್ನು ಪೊಲೀಸರು ನಿನ್ನೆ ಬೆಳಿಗ್ಗೆ ವಶಕ್ಕೆ ತೆಗೆದು ಕೊಂಡಿದ್ದರು. ಇಷ್ಟೆಲ್ಲಾ ಆದರೂ ರಾಹುಲ್ ಮಾಂಕೂಟತ್ತಿಲ್ ಇದುವರೆಗೆ ಪೊಲೀಸರ ಬಲೆಗೆ ಬೀಳದೆ ಕಳೆದ ೯ ದಿನಗಳಿಂದ ತಲೆಮರೆಸಿಕೊಂಡು ಜೀವಿಸುತ್ತಿದ್ದಾರೆ.
ಈ ಮಧ್ಯೆ ಅವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ತಲೆಮರೆಸಿಕೊಂಡಿರುವ ರಾಹುಲ್‌ರ ಪತ್ತೆಗಾಗಿ ವಿಶೇಷ ತನಿಖಾ ತಂಡ ಕೇರಳ ಮಾತ್ರವಲ್ಲದೆ ಕರ್ನಾಟಕ ಹಾಗೂ ತಮಿಳುನಾಡಿನಲ್ಲೂ ತೀವ್ರ ಶೋಧ ಆರಂಭಿಸಿದೆ.







