ಉಪ್ಪಳ: ತಂಪು ಪಾನೀಯ ಹಾಗೂ ನೀರನ್ನು ಕುಡಿದು ಬಾಟಲಿಯನ್ನು ಅಲ್ಲಲ್ಲಿ ಎಸೆಯು ವುದನ್ನು ತಡೆಗಟ್ಟುವ ಹಿನ್ನೆಲೆ ಯಲ್ಲಿ ಮಂಜೇಶ್ವರ ಹಾಗೂ ಮಂ ಗಲ್ಪಾಡಿ ಪಂಚಾಯತ್ ವತಿ ಯಿಂದ ಬೋಟಲ್ ಬೂತ್ ಸ್ಥಾಪಿಸಲಾಗಿದೆ. ಇನ್ನು ಸಾರ್ವ ಜನಿಕ ಸ್ಥಳದಲ್ಲಿ ಬಾಟಲಿ ಎಸೆ ಯದೆ ಸ್ವಚ್ಚತೆಯನ್ನು ಕಾಪಾಡಲು ಮಂಜೇಶ್ವರ ಪಂಚಾಯತ್ನಿAದ 5,22,600 ರೂಪಾಯಿ ವೆಚ್ಚದಲ್ಲಿ 25 ಕಡೆ ಬೋಟಲ್ ಬೂತ್ಗಳನ್ನು ಸ್ಥಾಪಿಸಲಾಗಿದೆ. ಹೊಸಂಗಡಿ ಪೇಟೆ, ಶಾಲಾ ಪರಿಸರ, ಬೀಚ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಇದನ್ನು ಇರಿಸಲಾಗಿದೆ. ಮಂಗಲ್ಪಾಡಿ ಪಂಚಾಯತ್ನಲ್ಲಿಯೂ ಉಪ್ಪಳ ಪೇಟೆ ಸಹಿತ ವಿವಿಧ ಕಡೆಗಳಲ್ಲಿ ಬೋಟಲ್ ಬೂತ್ ಇರಿಸಲಾಗಿದೆ.







