ಕಾಸರಗೋಡು: ನಗರಸಭೆಯ 4ನೇ ವಾರ್ಡ್ ಬಿಜೆಪಿ ಕುಟುಂಬ ಸಂಗಮ ವನ್ನು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಉದ್ಘಾಟಿಸಿದರು. ಜನರಲ್ ಆಸ್ಪತ್ರೆ ಹಾಗೂ ನಗರದ ರಸ್ತೆಗಳು ರಾಜ್ಯ ದಲ್ಲಿಯೇ ಅತ್ಯಂತ ಕಳಪೆ ಮಟ್ಟದಲ್ಲಿರು ವುದು ಜಿಲ್ಲೆಯಲ್ಲಾಗಿದ್ದು, ಇದರ ಹೊಣೆಗಾರಿಕೆಯಿಂದ ಪಾರಾಗಲು ದಶಕಗಳಿಂದ ನಗರಸಭೆ ಹಾಗೂ ವಿಧಾನಮಂಡಲವನ್ನು ಪ್ರತಿನಿಧೀಕರಿ ಸುವ ಐಕ್ಯರಂಗಕ್ಕೆ ಸಾಧ್ಯವಿಲ್ಲವೆಂದು ಅಶ್ವಿನಿ ನುಡಿದರು. ನಗರಸಭಾ ವೆಸ್ಟ್ ಏರಿಯಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಅಧ್ಯಕ್ಷತೆ ವಹಿಸಿದರು.
ಹಿರಿಯ ಮುಖಂಡರಾದ ಎ.ಟಿ. ನಾಯ್ಕ್, ನಾರಾಯಣನ್, ಮಂಡಲ ಅಧ್ಯಕ್ಷ, ವಾರ್ಡ್‌ನ ಅಭ್ಯರ್ಥಿ ಗುರುಪ್ರಸಾದ್ ಪ್ರಭು, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅನಿತಾ ನಾಯ್ಕ್, ಹೇಮಲತ ಮಾತನಾಡಿದರು.







