ಮುಳ್ಳೇರಿಯ: ಜಿಲ್ಲೆಯ ಗ್ರಾಮೀಣ ಪ್ರದೇಶವಾದ ಬೆಳ್ಳೂರಿನಲ್ಲಿ ಚುನಾವಣಾ ಪ್ರಚಾರ ಕಾವು ತೀವ್ರ ಗೊಂಡಿದೆ. ಜಿಲ್ಲೆಯಲ್ಲಿ ಬಿಜೆಪಿ ಆಡ ಳಿತ ನಡೆಸುವ ಪಂಚಾಯತ್ಗಳಲ್ಲಿ ಬೆಳ್ಳೂರು ಕೂಡಾ ಒಳಗೊಂಡಿದೆ. ಕಳೆದ ಎರಡು ಅವಧಿಯಲ್ಲಿ ಈ ಪಂಚಾಯತ್ನಲ್ಲಿ ಬಿಜೆಪಿ ಆಡಳಿತ ನಡೆಸಿದ್ದು, ಈ ಬಾರಿಯ ಚುನಾವಣೆ ಯಲ್ಲೂ ಭಾರೀ ಬಹುಮತದೊಂದಿಗೆ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆಗೈಯ್ಯುವ ನಿರೀಕ್ಷೆಯನ್ನು ಬಿಜೆಪಿ ನೇತಾರರು ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ಬಾರಿ ಈ ಪಂಚಾಯತ್ನಲ್ಲಿ ಒಟ್ಟು 13 ವಾರ್ಡ್ಗಳಿದ್ದವು. ಈ ಪೈಕಿ ಬಿಜೆಪಿ 9 ಸೀಟುಗಳನ್ನು ಗೆದ್ದುಕೊಂಡು ಆಡಳಿತಕ್ಕೇರಿತ್ತು. ಉಳಿದ ನಾಲ್ಕು ಸೀಟುಗಳಲ್ಲಿ ಎಡರಂಗ ಗೆಲುವು ಸಾಧಿ ಸಿತ್ತು. ಈ ಬಾರಿ ವಾರ್ಡ್ ವಿಭಜನೆ ಯಲ್ಲಿ ಒಂದು ವಾರ್ಡ್ ಹೆಚ್ಚಿದ್ದು, ಈ ಮೂಲಕ ವಾರ್ಡ್ಗಳ ಸಂಖ್ಯೆ ೧೪ಕ್ಕೇ ರಿದೆ. ಇದರಲ್ಲಿ 12 ವಾರ್ಡ್ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಎರಡು ವಾರ್ಡ್ಗಳಲ್ಲಿ ಬಿಜೆಪಿ ಸ್ವತಂತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಇದೇ ವೇಳೆ ಎಡರಂಗದಿಂದ ಸಿಪಿಎಂ 9 ವಾರ್ಡ್ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ನಾಲ್ಕು ವಾರ್ಡ್ಗಳಲ್ಲಿ ಎಡರಂಗದ ಸ್ವತಂತ್ರ ಅಭ್ಯರ್ಥಿಗಳಿದ್ದಾರೆ. ಪ್ರಸ್ತುತ ಪಂಚಾಯತ್ನಲ್ಲಿ ಯುಡಿಎಫ್ ಕೇವಲ ಆರು ವಾರ್ಡ್ಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದರಿಂದ ಬಹುತೇಕ ಕಡೆಗಳಲ್ಲಿ ಬಿಜೆಪಿ ಹಾಗೂ ಸಿಪಿಎಂ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. ಈ ಬಾರಿಯೂ ಬಿಜೆಪಿಗೆ ಬಹುಮತ ಲಭಿಸಲಿದ್ದು, ಈ ಮೂಲಕ ಸತತ ಮೂರನೇ ಬಾರಿಗೆ ಬಿಜೆಪಿ ಅಧಿಕಾರಕ್ಕೇರಲಿದೆ ಎಂದು ಬಿಜೆಪಿ ನೇತಾರರು ಹೇಳುತ್ತಿದ್ದಾರೆ. ಇದೇ ವೇಳೆ ಈ ಬಾರಿ ಎಡರಂಗ ಗೆಲುವು ಸಾಧಿಸಿ ಅಧಿಕಾರ ವಹಿಸಿಕೊಳ್ಳಲಿದೆಯೆಂದು ಸಿಪಿಎಂ ನೇತಾರರು ತಿಳಿಸುತ್ತಿದ್ದಾರೆ.
ಬೆಳ್ಳೂರು ಪಂಚಾಯತ್ನಲ್ಲಿ ಒಟ್ಟು 8279 ಮಂದಿ ಮತದಾರರು ಇದ್ದಾರೆ. ಈ ಪೈಕಿ 4052 ಪುರುರು, 4227 ಮಹಿಳೆಯರಾಗಿದ್ದಾರೆ. ಜಿಲ್ಲೆಯಲ್ಲಿ ಅತೀ ಕಡಿಮೆ ಮತದಾ ರರಿರುವ ಪಂಚಾಯತ್ ಬೆಳ್ಳೂರು ಆಗಿದೆ. ಈ ಪಂಚಾಯತ್ನಲ್ಲಿ ಈ ಬಾರಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿಡಲಾಗಿದೆ.







