ಎಸ್‌ಐಆರ್ ಡಿ. 18ರ ತನಕ ವಿಸ್ತರಣೆ: ಕೇರಳದಲ್ಲಿ 20 ಲಕ್ಷದಷ್ಟು ಮತದಾರರು ನಾಪತ್ತೆ

ಕಾಸರಗೋಡು: ಕೇರಳದಲ್ಲಿ ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಕ್ರಮ ಮುಂದುವರಿಯುತತಿರುವಂತೆಯೇ ರಾಜ್ಯದ ಮತದಾರ ಯಾದಿಯಲ್ಲಿ ಹೆಸರು ಒಳಗೊಂಡಿರುವವರ ಪೈಕಿ 20,29,703 ಮಂದಿಯನ್ನು ಪತ್ತೆಹಚ್ಚಲು ಈತನಕ ಸಾಧ್ಯವಾಗಲಿಲ್ಲ ವೆಂದು ಕೇರಳದ ಮುಖ್ಯ ಚುನಾವಣಾ ಆಯೋಗ ತಿಳಿಸಿದೆ.

ಎಸ್‌ಐಆರ್‌ಗಾಗಿ ಮತದಾರರಿಗೆ ಎನ್ಯುಮರೇಶನ್ ಫಾರ್ಮ್ ವಿತರಣೆ ಈಗ ಮುಂದುವರಿಯುತ್ತಿರುವಂ ತೆಯೇ ಅದರಲ್ಲಿ 20,29,703 ರಷ್ಟು ಮತದಾರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಅದರಿಂದಾಗಿ ಅವರಿಗೆ ಎನ್ಯುಮರೇಶನ್ ಫಾರ್ಮ್ ವಿತರಿಸಲು ಸಾಧ್ಯವಾಗಿಲ್ಲವೆಂದು ಚುನಾವಣಾ ಆಯೋಗ ತಿಳಿಸಿದೆ.  ಇವರಲ್ಲಿ ನಿಧನ ಹೊಂದಿದವರು. ಊರಲ್ಲಿಲ್ಲದವರು, ವಾಸಸ್ಥಳ ಬದಲಾಯಿಸಿದವರೂ ಒಳಗೊಂಡಿರುವುದಾಗಿ ಆಯೋಗ ತಿಳಿಸಿದೆ. ಕೇರಳದಲ್ಲಿ ಒಟ್ಟು 2.78 ಕೋಟಿ ಮತದಾರರಿದ್ದಾರೆ.

ಎಸ್‌ಐಆರ್‌ನ ದ್ವಿತೀಯ ಹಂತದ ಕ್ರಮ ಈಗ ಪ್ರಗತಿಯಲ್ಲಿದೆ. ಶೇ. 99.9 ರಷ್ಟು ಎನ್ಯುಮರೇಶನ್ ಫಾರ್ಮ್‌ಗಳ ವಿತರಣೆ ಈಗಾಗಲೇ ನಡೆದಿದೆ. ಇದರಲ್ಲಿ ಶೇ. 96.48 ರಷ್ಟು ಫಾರ್ಮ್‌ಗಳ ಅಪ್‌ಲೋಡಿಂಗ್ (ಡಿಜಿಟಲೈಸೇಶನ್) ಕ್ರಮವನ್ನು  ಪೂರ್ತೀಕರಿಸಲಾಗಿ ದೆಯೆಂದು ಆಯೋಗ ತಿಳಿಸಿದೆ.

ಇದೇ ಸಂದರ್ಭದಲ್ಲಿ ಕೇರಳದಲ್ಲಿ ಎಸ್‌ಐಆರ್ ಕ್ರಮದ ಸಮಯ ವ್ಯಾಪ್ತಿಯನ್ನು ಡಿಸೆಂಬರ್ 18ರ ತನಕ ವಿಸ್ತರಿಸಲಾಗಿದೆಯೆಂದು ಕೇಂದ್ರ ಚುನಾವಣಾ ಆಯೋಗದ ಕೇರಳ ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ. ಎಸ್‌ಐಆರ್ ನಡೆಸುವ ದಿನಾಂಕವನ್ನು ವಿಸ್ತರಿಸುವಂತೆ ಕೋರಿ ಮುಖ್ಯ ಕಾರ್ಯ ದರ್ಶಿಯವರು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು.  ಅದನ್ನು ಕೇಂದ್ರ ಚುನಾವಣಾ ಆಯೋಗ ಅಂಗೀಕರಿಸಿದೆ.

ಸ್ಥಳೀಯಾಡಳಿತ ಸಂಸ್ಥೆಗಳ ಚುನಾ ವಣೆ ಬಳಿಕವೂ ಎನ್ಯುಮರೇಶನ್ ಫಾರ್ಮ್ ಸಲ್ಲಿಸಲು ಅವಕಾಶವಿದೆ. ಇದರಂತೆ  ಫಾರ್ಮ್‌ಗಳನ್ನು ಡಿ. 18ರೊಳಗಾಗಿ ಸಲ್ಲಿಸಬೇಕಾಗಿದೆ. ಆ ಬಳಿಕ ಡಿ. 23ರಂದು ಕರಡು ಮತ ದಾರ ಯಾದಿ ಪ್ರಕಟಿಸಲಾಗುವುದು.

ಕೇರಳ ಸೇರಿದಂತೆ ವಿಧಾನ ಸಭೆಗಳಿಗೆ ಶೀಘ್ರ ಚುನಾವಣೆ ನಡೆಯಲಿರುವ 9 ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈಗ ಎಸ್‌ಐಆರ್ ನಡೆಯುತ್ತಿದೆ. ಇವುಗಳಲ್ಲಿ ಒಟ್ಟಾರೆಯಾಗಿ 50.97 ಕೋಟಿ ಮತದಾರರಿದ್ದು, ಇದರಲ್ಲಿ 50.92 ಕೋಟಿ ಮಂದಿಗೆ ಈಗಾಗಲೇ ಎನ್ಯುಮರೇಶನ್ ಫಾರ್ಮ್‌ಗಳನ್ನು ವಿತರಿಸಲಾಗಿದೆ. ಇದರಲ್ಲಿ ಶೇ. 95.27 ರಷ್ಟು ಫಾರ್ಮ್‌ಗಳ ಡಿಜಿಟಲೈಸೇಶನ್ ಕ್ರಮ ಈಗಾಗಲೇ ಪೂರ್ಣಗೊಂಡಿದೆ.

RELATED NEWS

You cannot copy contents of this page