ನೀಲೇಶ್ವರದಲ್ಲಿ ಕ್ಷೇತ್ರದಿಂದ ತಿರುವಾಭರಣ, ಹಣ ಕಳವು

ಹೊಸದುರ್ಗ: ನೀಲೇಶ್ವರ ದಲ್ಲಿ  ಕ್ಷೇತ್ರವೊಂದಕ್ಕೆ ಕಳ್ಳರು ನುಗ್ಗಿ ಚಿನ್ನಾಭರಣ ಸಹಿತ ವಿವಿಧ ಸಾಮಗ್ರಿಗಳನ್ನು ದೋಚಿದ್ದಾರೆ. ನೀಲೇಶ್ವರ ಅಯ್ಯಂಗುನ್ನತ್ತ್ ಶ್ರೀ ಭಗವತೀ ಕ್ಷೇತ್ರದಿಂದ  ಕಳವು ನಡೆದಿದೆ. ಗರ್ಭಗುಡಿಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ದೇವಿ ಯ ವಿಗ್ರಹದಿಂದ ತಿರುವಾಭರಣ ಹಾಗೂ ಕಾಣಿಕೆ ಹಣವನ್ನು ದೋಚಿ ದ್ದಾರೆಂದು ದೂರಲಾಗಿದೆ. ಇಂದು ಬೆಳಿಗ್ಗೆ ಸ್ಥಳೀಯರ ಗಮನಕ್ಕೆ ಬಂದಿದೆ. ನೀಲೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ.

RELATED NEWS

You cannot copy contents of this page