ರಾಹುಲ್‌ಗೆ ಅಲ್ಪ ನಿರಾಳ: ಬಂಧನಕ್ಕೆ  ಹೈಕೋರ್ಟ್‌ನಿಂದ ತಾತ್ಕಾಲಿಕ ತಡೆಯಾಜ್ಞೆ

ಕೊಚ್ಚಿ: ಯುವತಿಗೆ ಲೈಂಗಿಕ ಕಿರುಕುಳ ನೀಡಿ ಬಲವಂತವಾಗಿ ಗರ್ಭಪಾತ ನಡೆಸಿದ ಪ್ರಕರಣ ದಲ್ಲಿ ಆರೋಪಿಯಾದ ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ. ಬಾಬು ಅವರ ಏಕ ಸದಸ್ಯ ಪೀಠ ಇಂದು ಬೆಳಿಗ್ಗೆ ಪರಿಶೀಲಿಸಿ  ಬಂಧಿಸದಂತೆ   ತಾತ್ಕಾಲಿಕ ತಡೆಯಾಜ್ಞೆ ಹೊರಡಿಸಿದೆ.  ಇದರಿಂದ ರಾಹುಲ್‌ಗೆ  ಅಲ್ಪ ನೆಮ್ಮದಿ ಮೂಡುವಂತಾಗಿದೆ.  

ನಿರೀಕ್ಷಣಾ ಜಾಮೀನು ಕೋರಿ ರಾಹುಲ್ ಸಲ್ಲಿಸಿದ್ದ ಅರ್ಜಿಯ ಮೇಲಿನ ಮುಂದಿನ ಪರಿಶೀಲನೆಯನ್ನು ಹೈಕೋರ್ಟ್ ಡಿ. 15ಕ್ಕೆ ಮುಂದೂಡಿದೆ.     ನಿರೀಕ್ಷಣಾ ಜಾಮೀನು ಕೋರಿ ರಾಹುಲ್ ಸಲ್ಲಿಸಿದ್ದ ಅರ್ಜಿಯನ್ನು ತಿರುವನಂತಪುರ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಮೊನ್ನೆ ತಿರಸ್ಕರಿಸಿ ಅವರಿಗೆ ಜಾಮೀನು ನಿರಾಕರಿಸಿತ್ತು. ಅದರ ಬೆನ್ನಲ್ಲೇ ರಾಹುಲ್ ನಿರೀಕ್ಷಣಾ ಜಾಮೀ ನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದೇ ವೇಳೆ  ಪೊಲೀಸರು ಕೇಸು ದಾಖಲಿಸಿಕೊಂಡ ಬಳಿಕ ತಲೆಮರೆಸಿ ಕೊಂಡಿರುವ ರಾಹುಲ್‌ರನ್ನು ಇದು ವರೆಗೆ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಕಳೆದ 10 ದಿನಗಳಿಂದ ತಲೆ ಮರೆಸಿ ಕೊಂಡಿರುವ ರಾಹುಲ್‌ನ ಪತ್ತೆಗಾಗಿ ಕೇರಳ ಪೊಲೀಸರು ಕರ್ನಾಟಕ ಹಾಗೂ ತಮಿಳುನಾಡಿ ನಲ್ಲಿ ತೀವ್ರ ಶೋಧ ನಡೆಸುತ್ತಿದ್ದಾರೆ. 

ಇದೇ ಸಂದರ್ಭದಲ್ಲಿ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ ಇನ್ನೋ ರ್ವೆ ಯುವತಿ ಪೊಲೀ ಸರಿಗೆ ಹೇಳಿಕೆ ನೀಡುವುದಾಗಿ ಪೊಲೀ ಸರಿಗೆ ತಿಳಿಸಿದ್ದಾಳ.  

RELATED NEWS

You cannot copy contents of this page