ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್ನ 17ನೇ ವಾರ್ಡ್ ಕೊಯಿಪ್ಪಾಡಿ ಕಡಪ್ಪುರದಲ್ಲಿ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿ ವಿಕ್ರಂ ಪೈಯವರು ಗೆಲುವು ಸಾಧಿಸುವುದು ಖಚಿತವೆಂದು ಪಕ್ಷದ ನೇತಾರರು ಹಾ ಗೂ ಕಾರ್ಯಕರ್ತರು ಹೇಳುತ್ತಿದ್ದಾರೆ.
ಕುಂಬಳೆಯ ಪ್ರಮುಖ ಉದ್ಯಮಿ ಯಾಗಿರುವ ವಿಕ್ರಂ ಪೈಯವರು ಪ್ರಾಮಾಣಿಕತೆಯುಳ್ಳ ಸಾಮಾಜಿಕ ಕಾರ್ಯಕರ್ತನಾಗಿದ್ದಾರೆ. ಈಗಾಗಲೇ ವಾರ್ಡ್ನ ಮತದಾರರನ್ನು ಭೇಟಿ ಯಾಗಿ ಮತಯಾಚಿಸಿರುವ ವಿಕ್ರಂ ಪೈಯವರು ತಾನು ಈ ವಾರ್ಡ್ನಲ್ಲಿ ಗೆಲುವು ಸಾಧಿಸಿದರೆ ಈ ನಾಡನ್ನು ಅಭಿವೃದ್ಧಿಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಪಂಚಾಯತ್ನಲ್ಲಿ ಆಡಳಿತ ನಡೆಸಿದ ಐಕ್ಯರಂಗ ಹಾಗೂ ರಾಜ್ಯಸರಕಾರ ಕೊಯಿಪ್ಪಾಡಿ ಕಡಪ್ಪುರ ವಾರ್ಡ್ನ ಅಭಿವೃದ್ಧಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ವಿಕ್ರಂ ಪೈಯವರು ಗೆಲುವು ಸಾಧಿಸಿದರೆ ಈ ನಾಡು ಅಭಿವೃದ್ಧಿಗೊ ಳ್ಳುವುದು ಖಚಿತವೆಂದು ಪಕ್ಷದ ಕಾರ್ಯಕರ್ತರು ಹಾಗೂ ನಾಗರಿಕರು ಹೇಳುತ್ತಿದ್ದಾರೆ. ಕೊಯಿಪ್ಪಾಡಿ ಕಡಪ್ಪುರದಲ್ಲಿ ಮೀನು ಕಾರ್ಮಿಕರ ಸೌಕರ್ಯಾರ್ಥ ಪುಲಿಮುಟ್ಟ್ ನಿರ್ಮಿಸುವುದಾಗಿ ಈ ಹಿಂದಿನ ಪಂಚಾಯತ್ ಆಡಳಿತ ಹಾಗೂ ಸರಕಾರ ಭರವಸೆ ನೀಡಿದ್ದರೂ ಇದುವರೆಗೆ ಅದು ನಿರ್ಮಾಣಗೊಂ ಡಿಲ್ಲ. ಅದೇ ರೀತಿ ಈ ವಾರ್ಡ್ನಲ್ಲಿ ಸರಿಯಾದ ರಸ್ತೆ, ದಾರಿ ಸೌಕರ್ಯವಿಲ್ಲದೆ ಜನರು ಸಂಚಾರ ಸಮಸ್ಯೆಎದುರಿಸುತ್ತಿದ್ದಾರೆ. ತಾನು ಇಲ್ಲಿ ಗೆಲುವು ಸಾಧಿಸಿದರೆ ಕೇಂದ್ರ ಸರಕಾರದ ಯೋಜನೆ ಮೂಲಕ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಾಣುವುದಾಗಿ ವಿಕ್ರಂ ಪೈಯವರು ತಿಳಿಸಿದ್ದಾರೆ.







