ಕಾಸರಗೋಡು: ಜಿಲ್ಲೆಯಲ್ಲಿ ಡಿ. 11ರಂದು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಯಲಿರುವಂತೆಯೇ ಭದ್ರತಾ ಕ್ರಮದಂಗವಾಗಿ ಕಾಸರಗೋಡು ನಗರದಲ್ಲಿ ನಿನ್ನೆ ಪೊಲೀಸರು ಮತ್ತು ಕ್ಷಿಪ್ರ ಕಾರ್ಯಾಚರಣಾ ಪಡೆ ತಂಡದಿಂದ (ರ‍್ಯಾಪಿಡ್ ಆಕ್ಷನ್ ಪೋರ್ಸ್) ಜಂಟಿಯಾಗಿ ಪಥ ಸಂಚಲನ ನಡೆಸಲಾಯಿತು. ನಗರದ ಹಳೆ ಸೂರ್ಲುನಿಂದ ಆರಂಭಗೊಂಡ ಪಥಸಂಚಲನ, ಹೊಸ ಬಸ್ ನಿಲ್ದಾಣ, ಹಳೇ ಬಸ್ ನಿಲ್ದಾಣ ಸೇರಿದಂತೆ ನಗರ ಪ್ರಧಾನ ರಸ್ತೆಗಳ ಮೂಲಕ ಈ ಪಥಸಂಚಲನ ನಡೆಸಲಾಯಿತು. ಇದರ ಹೊರತಾಗಿ ಹೊಸದುರ್ಗದಲ್ಲೂ ಪಥ ಸಂಚಲನ ನಡೆಸಲಾಯಿತು.
ಕುಂಬಳೆಯಲ್ಲಿ ಪ್ರಚಾರ ಮುಕ್ತಾಯ ಕಾರ್ಯಕ್ರಮ ರೋಡ್ ಶೋಗೆ ಅನುಮತಿಯಿಲ್ಲ ಕುಂಬಳೆ: ತ್ರಿಸ್ತರ ಪಂಚಾಯತ್ ಚುನಾವಣೆಯ ಪ್ರಚಾರ ಮುಕ್ತಾಯ ದಂಗವಾಗಿ ಕುಂಬಳೆ ಪೇಟೆಯಲ್ಲಿ ರೋಡ್ ಶೋ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಆದರೆ ಪಕ್ಷಗಳಿಗೆ, ಒಕ್ಕೂಟಗಳಿಗೆ ವಿಭಿನ್ನ ಸ್ಥಳ ಗಳಲ್ಲಿ ಕಾರ್ನರ್ ಸಭೆಗಳನ್ನು ನಡೆಸಲು ಅನುಮತಿ ನೀಡಲಾಗಿದೆಯೆಂದು ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಟಿ.ಕೆ. ಮುಕುಂದನ್ ತಿಳಿಸಿದ್ದಾರೆ. ಪ್ರಚಾರ ಮುಕ್ತಾಯ ಕಾರ್ಯಕ್ರ ಮವನ್ನು ಶಾಂತಿಯುತವಾಗಿ ನಡೆಸಲು ಎಲ್ಲರೂ ಸಹಕರಿಸಬೇಕೆಂದು ಅವರು ವಿನಂತಿಸಿದ್ದಾರೆ. ಇದೇ ವೇಳೆ ಸೀತಾಂಗೋಳಿಯಲ್ಲಿ ರೋಡ್ ಶೋ ನಡೆಸಲು ಎಲ್‌ಡಿಎಫ್, ಬಿಜೆಪಿಗೆ ಪೊಲೀಸರು ಒಪ್ಪಿಗೆ ನೀಡಿದ್ದಾರೆ. ವಿಭಿನ್ನ ಕಡೆಗಳಲ್ಲಿ ರೋಡ್ ಶೋ ನಡೆಸಲು ಅನುಮತಿ ನೀಡಲಾಗಿದೆ.







