ನೀರ್ಚಾಲು: ಕುಸಿದುಬಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಯಲ್ಲಿದ್ದ ಗೃಹಿಣಿ ಮೃತಪಟ್ಟರು.
ಏಣಿಯರ್ಪು ತಾನಂ ವೀಟಿಲ್‌ನ ಕೃಷ್ಣ ಎಂಬವರ ಪತ್ನಿ ಸುಶೀಲ (58) ಮೃತಪಟ್ಟ ವರಾಗಿದ್ದಾರೆ. ಕಳೆದ ತಿಂಗಳ ೧೧ರಂದು ಮನೆಯಲ್ಲಿ ಕುಸಿದು ಬಿದ್ದ ಸುಶೀಲರನ್ನು ಕಾಸರ ಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮಧ್ಯಾಹ್ನ ಆಸ್ಪತ್ರೆಯಲ್ಲಿ ನಿಧನ ಸಂಭವಿಸಿದೆ.
ಮೃತರು ಪತಿ, ಮಕ್ಕಳಾದ ರಮ್ಯ, ರಂಜಿತ್, ರತೀಶ್, ಅಳಿಯ ಉದಯ ಕುಮಾರ್, ಸಹೋದರ-ಸಹೋ ದರಿಯರಾದ ನಾರಾಯಣಿ, ಮಾಧವಿ, ಕೃಷ್ಣನ್, ಮೋಹಿನಿ, ಶಾರದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಇನ್ನೋರ್ವ ಸಹೋದರ ರಾಘವನ್ ಈ ಹಿಂದೆ ನಿಧನರಾಗಿದ್ದಾರೆ.







