ಮಂಜೇಶ್ವರ: ವರ್ಕಾಡಿ ತೌಡುಗೋಳಿ ಸಮೀಪ ಸಾರ್ವ ಜನಿಕ ಸ್ಥಳದಲ್ಲಿ ಹಣ ಕಟ್ಟಿ ಕೋಳಿ ಅಂಕದಲ್ಲಿ ನಿರತರಾಗಿರುವುದು ತಿಳಿದು ಬಂದ ಹಿನ್ನೆಲೆಯಲ್ಲಿ ಎಸ್ಐ ಉಮೇಶ್ ನೇತೃತ್ವದಲ್ಲಿ ಮಂಜೇಶ್ವರ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ೧ ಕೋಳಿ ಹಾಗೂ ೧೧೦೦ ರೂ.ವನ್ನು ಇಲ್ಲಿಂದ ವಶಪಡಿಸಲಾಗಿದೆ. ಕರ್ನಾಟಕದ ಕುತ್ತಾರ್ ಮುನ್ನೂರು ನಿವಾಸಿ ರಘು (44)ನನ್ನು ಸೆರೆ ಹಿಡಿದಿದ್ದು, ಉಳಿದವರು ಓಡಿ ಪರಾರಿಯಾಗಿದ್ದಾರೆಂದು ಪೊಲೀಸರುತಿಳಿಸಿದ್ದಾರೆ.







