ಕೊಚ್ಚಿ: ಮಲೆಯಾಟೂರ್‌ನಿಂದ ನಾಪತ್ತೆಯಾದ 19ರ ಹರೆಯದ ಯುವತಿಯ ಮೃತದೇಹ ನಿಗೂಢ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಮುಂಡಂಙಮಟ್ಟಂ ವೀಟಿಲ್ ಚಿತ್ರಪ್ರಿಯ (19)ರ ಮೃತದೇಹ ಜನವಾಸವಿಲ್ಲದ ಹಿತ್ತಿಲಲ್ಲಿ ಪತ್ತೆಹಚ್ಚಲಾಗಿದೆ. ಯುವತಿಯ ತಾಯಿ ಕೆಲಸ ಮಾಡುವ ಕ್ಯಾಟರಿಂಗ್ ಘಟಕದ ಕಾರ್ಮಿಕರ ಹುಡುಕಾಟದ ಮಧ್ಯೆ ಮೃತದೇಹ ಪತ್ತೆಯಾಗಿದೆ. ಚಿತ್ರಪ್ರಿಯಳ ಮನೆಯಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಮಣಪ್ಪಾಟ್‌ಚಿರ ಸಮೀಪ ನಿನ್ನೆ ಮಧ್ಯಾಹ್ನ ಮೃತದೇಹವನ್ನು ಸ್ಥಳೀಯರು ಪತ್ತೆಹಚ್ಚಿರುವುದು.
ಸಿಸಿ ಟಿವಿ ದೃಶ್ಯಗಳ ಆಧಾರದಲ್ಲಿ ನಡೆಸಿದ ತನಿಖೆಯಲ್ಲಿ ಈಕೆಯ ಗೆಳೆಯ ಅಲನ್‌ನನ್ನು ಪೊಲೀಸರು ಕಸ್ಟಡಿಗೆ ತೆಗೆದು ಪ್ರಶ್ನಿಸಿದಾಗ ಈತ ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ. ಮದ್ಯದಮಲಿನಲ್ಲಿ ಈ ಕೃತ್ಯವೆಸಗಿರುವುದಾಗಿಯೂ ಆರೋಪಿ ತಿಳಿಸಿದ್ದಾನೆ. ಚಿತ್ರಪ್ರಿಯ ಜಗಳ ಮಾಡಿದಾಗ ಕಲ್ಲು ತೆಗೆದು ತಲೆಗೆ ಹೊಡೆದಿರುವುದಾಗಿಯೂ ಅಲನ್ ತಿಳಿಸಿದ್ದಾನೆ.
ರಸ್ತೆ ಬದಿಯಲ್ಲೇ ಇರುವ ಜನವಾಸವಿಲ್ಲದ ಹಿತ್ತಿಲಿನಲ್ಲಿ ಜೀರ್ಣಿಸಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ತಿಂಗಳ ೬ರಂದು ಚಿತ್ರಪ್ರಿಯ ನಾಪತ್ತೆಯಾಗಿದ್ದರು. ಬಳಿಕ ಕುಟುಂಬ ಪೊಲೀಸರಿಗೆ ದೂರು ನೀಡಿತ್ತು. ಗೆಳೆಯನೊಂದಿಗೆ ಚಿತ್ರಪ್ರಿಯ ತೆರಳುತ್ತಿರುವ ಸಿಸಿ ಟಿವಿ ದೃಶ್ಯಗಳು ಪೊಲೀಸರಿಗೆ ಲಭಿಸಿದ ಆಧಾರದಲ್ಲಿ ಸಮೀಪ ಪ್ರದೇಶಗಳಲ್ಲಿ ತಪಾಸಣೆ ನಡೆಸಲಾಗಿದೆ. ಇಂದು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಲಿದೆ. ಬೆಂಗಳೂರಿನಲ್ಲಿ ಏವಿಯೇಶನ್ ಪದವಿ ವಿದ್ಯಾರ್ಥಿನಿಯಾಗಿದ್ದಾಳೆ ಮೃತಪಟ್ಟ ಚಿತ್ರ ಪ್ರಿಯ.







