ತಿರುವನಂತಪುರ: ಕಿರುತೆರೆಯಲ್ಲಿ ಸಕ್ರಿಯರಾಗಿದ್ದ ಹರಿತಾ ಜಿ. ನಾಯರ್ ಪತಿ ವಿನಾಯಕನೊಂದಿಗಿನ ಸಂಬಂಧವನ್ನು ವಿಚ್ಛೇಧಿಸಿರುವುದಾಗಿ ಸಂದೇಶ ನೀಡಿದ್ದಾರೆ. ತನ್ನ ಸೋಷ್ಯಲ್ ಮೀಡಿಯಾ ಪೇಜ್‌ನಲ್ಲಿ ಈ ಮಾಹಿತಿಯನ್ನು ಈಕೆ ಬಹಿರಂಗಪಡಿಸಿದ್ದಾರೆ. ಚಿಕ್ಕಂದಿನಲ್ಲೇ ಇವರಿಬ್ಬರು ಗೆಳೆಯರಾಗಿದ್ದು, 15 ವರ್ಷದ ಗೆಳೆತನದ ಬಳಿಕ ೨೦೨೩ರಲ್ಲಿ ವಿವಾಹವಾಗಿದ್ದರು. ನರ್ಸಿಂಗ್ ಕಲಿಯುತ್ತಿದ್ದ ಹರಿತಾ ಜಿ. ನಾಯರ್ ಅನಿರೀಕ್ಷಿತವಾಗಿ ರಿಯಾಲಿಟಿ ಶೋಗೆ ತಲುಪಿದ್ದು, ಅಲ್ಲಿಂದ ಅಭಿನಯರಂಗಕ್ಕೆ ಪದಾರ್ಪಣೆ ಮಾಡಿದರು. ಆ ಬಳಿಕ ಹಲವಾರು ಹಿಟ್ ಧಾರಾವಾಹಿಗಳಲ್ಲಿ ವೇಷ ಹಾಕಿದ್ದ ಈಕೆ ಈಗ ‘ಚೆಂಬರತ್ತಿ’ ಎಂಬ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ಇವರಿಬ್ಬರೂ ಏಕಾಂಗಿಯಾಗಿ ವಾಸಿಸುತ್ತಿದ್ದು, ನಮ್ಮಿಬ್ಬರ ಮಧ್ಯೆಗಿನ ಸಂಬಂಧವನ್ನು ಕೊನೆಗೊಳಿ ಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಸಂದೇಶದಲ್ಲಿ ಅವರು ತಿಳಿಸಿದ್ದಾರೆ.







