ಚೆನ್ನೈ: ವಿಮಾನ ನೌಕರ ಒಳಗೊಂಡ ಚಿನ್ನ ಸಾಗಾಟ ತಂಡವನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಸೆರೆಹಿಡಿದಿದ್ದಾರೆ. 11.5 ಕೋಟಿ ರೂ. ಮೌಲ್ಯದ 9.46 ಕಿಲೋ ಚಿನ್ನವನ್ನು ಇವರಿಂದ ವಶಪಡಿಸ ಲಾಗಿದೆ. ದುಬಾಯಿಯಿಂದ ಬಂದ ವಿಮಾನದ ನೌಕರ ಎದೆ, ಹೊಟ್ಟೆಯ ಲ್ಲಿ ಚಿನ್ನವನ್ನು ಬಚ್ಚಿಟ್ಟು ಬೆಲ್ಟ್‌ನಲ್ಲಿ ಬಿಗಿದಿಟ್ಟಿದ್ದನು. ಚಿನ್ನವನ್ನು ಪಡೆಯಲು ಬಂದ ಮೂವರು ಹಾಗೂ ಚಿನ್ನ ಕಳ್ಳಸಾಗಾಟಕ್ಕೆ ಸಹಾಯ ವೊದಗಿಸಲು ತಲುಪಿದ ಓರ್ವನನ್ನು ಈ ಸಂಬಂಧ ಸೆರೆಹಿಡಿಯಲಾಗಿದೆ.







