ಮಹಿಳೆಯ ವಿಷಯದಲ್ಲಿ ಉಂಟಾದ ವಿವಾದ: 20ರ ಯುವಕನನ್ನು ಕೊಲೆಗೈದು ತುಂಡುಮಾಡಿ ಕೊಳವೆಬಾವಿಗೆ ಹಾಕಿದ ಗೆಳೆಯ

ಮುಂಬಯಿ: ಮಹಿಳೆಯ ವಿಷಯದಲ್ಲಿ ಉಂಟಾದ ವಿವಾದದ ಬೆನ್ನಲ್ಲೇ 20 ವರ್ಷದ ಯುವಕನನ್ನು ಕೊಲೆಗೈದ ಬಳಿಕ ಮೃತದೇಹವನ್ನು ತುಂಡು ತುಂಡಾಗಿ ಮಾಡಿ ಗೆಳೆಯ ಕೊಳವೆ ಬಾವಿಯಲ್ಲಿ ಹಾಕಿದ ಘಟನೆ ನಡೆದಿದೆ. ಗುಜರಾತ್‌ನ ನಕತ್ರಾಣದಲ್ಲಿ ದಾರುಣ ಘಟನೆ ಸಂಭವಿಸಿದೆ. ಆರು ದಿನಗಳಿಂದ ನಾಪತ್ತೆಯಾಗಿದ್ದ 20ರ ಹರೆಯದ ಯುವಕನನ್ನು ಪೊಲೀಸರು ನಡೆಸಿದ ತನಿಖೆಯಲ್ಲಿ ಕೊಲೆಗೈದಿ ರುವುದು ಪತ್ತೆಹಚ್ಚಲಾಗಿದೆ. ಓರ್ವೆ ಮಹಿಳೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಗೆಳೆಯ ಕೊಲೆಗೈದಿರುವು ದಾಗಿ ಪೊಲೀಸರು ತಿಳಿಸಿದ್ದಾರೆ.

ಈ ತಿಂಗಳ 2ರಂದು ನಕತ್ರಾಣದ ನುರು ಗ್ರಾಮದಲ್ಲಿ ನಾಪತ್ತೆಯಾಗಿದ್ದ ರಮೇಶ್ ಮಹೇಶ್ವರಿ ಕೊಲೆಗೀಡಾದ ಯುವಕನಾಗಿದ್ದಾರೆ. ಈ ಬಗ್ಗೆ ಸಂಬಂಧಿಕರು ನೀಡಿದ ದೂರಿನಂತೆ ತನಿಖೆ ನಡೆಯುತ್ತಿರುವ ವೇಳೆ ಶಂಕೆ ತಾಳಿ ಗೆಳೆಯ ಕಿಶೋರ್‌ನನ್ನು ಪೊಲೀಸರು ವಿಚಾರಣೆಗೊಳಪಡಿಸಿದರು. ಇದರಿಂದ ರಮೇಶ್‌ನನ್ನು ಕೊಲೆಗೈದ ಬಗ್ಗೆ ಕಿಶೋರ್ ಸುಳಿವು ನೀಡಿದ್ದಾರೆ. ಕಿಶೋರ್ ಇನ್‌ಸ್ಟಾಗ್ರಾಮ್‌ನಲ್ಲಿ ಮಹಿಳೆಗೆ ಸಂದೇಶ ರವಾನಿಸಿದ್ದನು. ಈ ವಿಷಯವನ್ನು ರಮೇಶ್‌ನಲ್ಲಿ ಈತ ತಿಳಿಸಿದ್ದನು. ಈ ಘಟನೆ ಇವರಿಬ್ಬರ ಮಧ್ಯೆ ದ್ವೇಷ ಸೃಷ್ಟಿಗೆ ಕಾರಣವಾಯಿತು. ಅದರ ಬೆನ್ನಲ್ಲೇ ಕಿಶೋರ್ ರಮೇಶ್‌ನನ್ನು ಕೊಲೆಗೈಯ್ಯಲು ತೀರ್ಮಾನಿಸಿದ್ದನು.  ಕಿಶೋರ್‌ನನ್ನು ಪ್ರಶ್ನಿಸಿದಾಗ ಹಳ್ಳಿಗೆ ಕರೆದುಕೊಂಡು ಹೋಗಿ ಕೊಲೆಗೈದ ಬಳಿಕ ತುಂಡು ತುಂಡು ಮಾಡಿರುವುದಾಗಿ ಪೊಲೀಸರಲ್ಲಿ ತಿಳಿಸಿದ್ದಾನೆ. ಉಳಿದ ಭಾಗಗಳನ್ನು ಅಲ್ಲೇ ಹೊಂಡತೆಗೆದು ಹಾಕಿರುವುದಾಗಿಯೂ ಆತ ತಿಳಿಸಿದ್ದಾನೆ. ಈತ ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಸಂದರ್ಶಿಸಿದ ಪೊಲೀಸರು ಅಲ್ಲಿಂದ ಮೃತದೇಹದ ಅವಶಿಷ್ಟಗಳನ್ನು ಪತ್ತೆಹಚ್ಚಿದ್ದು, ಕೊಳವೆಬಾವಿಯಿಂದ ತುಂಡುಗಳನ್ನು ಹೊರ ತೆಗೆದಿದ್ದಾರೆ. ತನಿಖೆ ಪ್ರಗತಿಯಲ್ಲಿದೆ.

RELATED NEWS

You cannot copy contents of this page