ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಬ್ಡಾ ಜೆಯಲ್ಲಿ ಅಭ್ಯರ್ಥಿಯ ಮನೆಯ ಮುಂದೆ ನಡೆದ ನಾಡಬಾಂಬ್ ಸ್ಫೋಟದಲ್ಲಿ ಸಾಕುನಾಯಿ ಸಾವಿಗೀಡಾದ ಘಟನೆ ನಡೆದಿದೆ. ವಿಷಯ ತಿಳಿದು ತಲುಪಿದ ಬದಿಯಡ್ಕ ಪೊಲೀಸರು ಸ್ಫೋಟಗೊಳ್ಳದೆ ಉಳಿದ ಮೂರು ನಾಡಬಾಂಬ್‌ಗಳನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಜಿಲ್ಲಾ ಪಂಚಾ ಯತ್ ಬದಿಯಡ್ಕ ಡಿವಿಶನ್‌ನ ಎಡರಂಗ ಅಭ್ಯರ್ಥಿಯಾದ ಕಾಡ್ರಬೆಳ್ಳಿಗೆಯ ಪ್ರಕಾಶರ ಮನೆ ಸಮೀಪದ ತೋಟದಲ್ಲಿ ಇಂದು ಬೆಳಿಗ್ಗೆ 7 ಗಂಟೆ ವೇಳೆ ಭಾರೀ ಶಬ್ದದೊಂದಿಗೆ ಸ್ಫೋಟ ನಡೆದಿದೆ. ಶಬ್ದ ಕೇಳಿ ಜನರು ಅಲ್ಲಿಗೆ ತಲುಪಿದಾಗ ಪ್ರಕಾಶರ ಸಾಕುನಾಯಿ ಸಾವಿಗೀಡಾಗಿರುವುದು ಕಂಡುಬಂದಿದೆ. ಸಮೀಪದಲ್ಲಿ ಇತರ ಮೂರು ನಾಡ ಬಾಂಬ್‌ಗಳನ್ನು ಪತ್ತೆಹಚ್ಚಲಾಗಿದೆ. ಈ ಪ್ರದೇಶದಲ್ಲಿ ಕಾಡುಹಂದಿ ಉಪಟಳ ತೀವ್ರಗೊಂಡಿ ದೆ. ಹಂದಿಗಳನ್ನು ಕೊಲ್ಲಲು ಇರಿಸಿದ ಸ್ಫೋಟಕ ವಸ್ತು ಸಿಡಿದಿರುವುದಾಗಿ ಸಂಶಯಿಸಲಾಗುತ್ತಿದೆ. ಘಟನೆ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.







