ಬದಿಯಡ್ಕ: ನೀರ್ಚಾಲು ಕುಮಾರಸ್ವಾಮಿ ಭಜನಾ ಮಂದಿರದ 51ನೇ ವಾರ್ಷಿಕೋತ್ಸವ ನಿನ್ನೆ ವಿವಿಧ ಕಾರ್ಯಕ್ರಮ ಗಳೊಂದಿಗೆ ಜರಗಿತು. ಬೆಳಿಗ್ಗೆ 6.30ಕ್ಕೆ ಧ್ವಜಾರೋಹಣ, ಗಣಪತಿ ಹವನ, ಜರಗಿತು. ಮಂದಿರದ ಅಧ್ಯಕ್ಷ ನಾರಾಯಣ ಶೆಟ್ಟಿ, ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ್ ನೇತೃತ್ವ ವಹಿಸಿದರು. ವಿವಿಧ ತಂಡಗಳಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ, ಅಪರಾಹ್ನ 2ರಿಂದ ಭಜನೆ, ದೀಪ ಪ್ರತಿಷ್ಠೆ, ರಾತ್ರಿ ಮಹಾಪೂಜೆ ಜರಗಿತು.







