ಕೌತುಕ ತಂದ ತ್ರಿವಳಿ ಸಹೋದರಿಯರ ಮತದಾನ

ಮುಳಿಯಾರು: ಪಂಚಾಯತ್‌ನ  ಇರಿಯಣ್ಣಿ ಜಿವಿಎಚ್‌ಎಸ್‌ಎಸ್ ಬೂತ್‌ಗೆ ತಲುಪಿದ ಮೂವರು ಯುವತಿಯರನ್ನು ಕಂಡು ಮತದಾರರು ಹಾಗೂ ಅಧಿಕಾರಿಗಳಿಗೆ ಕೌತುಕ ಮೂಡಿತು. ತ್ರಿವಳಿ ಸಹೋದರಿಯರಾದ ಇವರು ಜೊತೆಯಾಗಿ ಬಂದು ಮತದಾನಕ್ಕಾಗಿ ಸರದಿ ಸಾಲಿನಲ್ಲಿ ನಿಂತಿದ್ದರು. ಇರಿಯಣ್ಣಿ ಬೇಪು ನಿವಾಸಿ ಗಂಗಾಧರನ್- ರೋಹಿಣಿ ದಂಪತಿಯ ಪುತ್ರಿಯರಾಗಿದ್ದಾರೆ. ರಂಜಿಶ, ರಂಜಿಮ, ರಂಜಿತ ಎಂಬ ಹೆಸರಿನ ಈ ಮೂವರು ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದರೂ, ಮತದಾನ ಮಾಡಲು ಏಕ ಸಮಯದಲ್ಲಿ ಬೂತ್‌ಗೆ ತಲುಪಿರುವುದು ನೋಡುಗರಿಗೆ ಆಶ್ಚರ್ಯ ಸೃಷ್ಟಿಸಿತು.

RELATED NEWS

You cannot copy contents of this page