ಕಾಸರಗೋಡು: ಅತ್ಯಂತ ತೀವ್ರ ಪೈಪೋಟಿ ಕಂಡು ಬಂದ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಕಾಸರಗೋಡು ಜಿಲ್ಲೆಯ 4 ಪಂಚಾಯತ್‌ಗಳಲ್ಲಿ ಸಮಾನ ವಾರ್ಡ್‌ಗಳಲ್ಲಿ ಗೆಲ್ಲಲು ಸಾಧ್ಯವಿದೆ ಎಂದು ಸೂಚನೆ ಲಭಿಸಿದೆ. ಜಿಲ್ಲೆಯ ಚುನಾವಣಾ ರಂಗವನ್ನು ಸೂಕ್ಷ್ಮವಾಗಿ ಅವಲೋಕಿಸುವ ಸ್ವತಂತ್ರ ರಾಜಕೀಯ ನಿರೀಕ್ಷಕರು ಈ ವಿಷಯ ತಿಳಿಸಿದ್ದಾರೆ. ರಾಜ್ಯದ ಗಡಿ ಪಂಚಾಯತ್‌ಗಳಾದ ಪೈವಳಿಕೆ, ವರ್ಕಾಡಿ, ಮೀಂಜ, ಮಂಜೇಶ್ವರ ಎಂಬೀ ಗ್ರಾಮ ಪಂಚಾಯತ್‌ಗಳಲ್ಲಿ ಯಾರಿಗೂ ಬಹುಮತವಿಲ್ಲದ ಸ್ಥಿತಿ ಉಂಟಾಗಲಿದೆ ಎಂದು ಅಭಿಪ್ರಾಯಪಡಲಾಗಿದೆ.
ಕಳೆದ ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿ ಜಯ ಗಳಿಸಲಿದೆ ಎಂದು ನಿರೀಕ್ಷಿಸಿದ ಮಂಜೇಶ್ವರ ವಿಧಾನಸಭಾ ಮಂಡಲದ ವ್ಯಾಪ್ತಿಯಲ್ಲಿ ಬರುವ ಪಂಚಾಯತ್‌ಗಳಾಗಿವೆ ಇವು. ಇದೇ ವೇಳೆ ಕಾಸರಗೋಡು ಜಿಲ್ಲಾ ಪಂಚಾಯತ್ ಆಡಳಿತವನ್ನು ಎಡರಂಗ ಉಳಿಸಿಕೊಳ್ಳಲಿದೆ ಎಂದು ರಾಜಕೀಯ ತಜ್ಞರು ನುಡಿಯುತ್ತಾರೆ. ಮತದಾರರನ್ನು ಸಮೀಪಿಸಿದಾಗ ಸಾಮಾನ್ಯ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದಾಗ ಹಲವರು ತ್ರಿಸ್ತರ ಪಂಚಾಯತ್‌ಗಳಿಗೆ ಒಂದೇ ಪಕ್ಷಕ್ಕೆ ಮತ ನೀಡಬೇಕೆಂಬ ನಿಲುವು ಪ್ರಾಕೃತವಾಗಿದ್ದು, ಈ ಹಿನ್ನೆಲೆಯಲ್ಲಿ ಬ್ಲೋಕ್, ಜಿಲ್ಲಾ ಪಂಚಾಯತ್‌ಗಳಿಗೆ ವಿಭಿನ್ನ ಪಕ್ಷಗಳಿಗೆ ಮತ ನೀಡುವ ಸೂಚನೆ ನೀಡಿದ್ದರು. ಮತದಾರರಲ್ಲಿ ಹೆಚ್ಚಿನವರಿಗೆ ರಾಜಕೀಯ ವಿಧೇಯತ್ವ ನಷ್ಟಗೊಂಡಿದೆ. ಇದು ತಿಂಗಳುಗಳ ಬಳಿಕ ಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ವಾಧೀನ ಉಂಟುಮಾಡಲಿದೆ ಎಂದು ಕೂಡಾ ಹೇಳಲಾಗುತ್ತಿದೆ.







