ಮುಳ್ಳೇರಿಯ: ಸ್ಥಳೀಯಾಡಳಿತ ಸಂಸ್ಥೆಗಳಿಗಿರುವ ಚುನಾವಣೆಯಲ್ಲಿ ಬೆಳ್ಳೂರು ಹೈಯರ್ ಸೆಕೆಂಡರಿ ಶಾಲೆಯ ಬೂತ್‌ಗೆ ತಲುಪಿದ ಮತ ದಾರರನ್ನು ಹಸಿರು ಕ್ರಿಯಾಸೇನೆಯ ಕಾರ್ಯಕರ್ತೆಯರು ಸಿದ್ಧಪಡಿಸಿದ ಮನೋಹರವಾದ ಪ್ರವೇಶದ್ವಾರ ಸ್ವಾಗತಿಸಿದೆ. ಈ ಪ್ರವೇಶದ್ವಾರ ಸಿದ್ಧಪಡಿಸುವುದಕ್ಕೆ ಬೆಳ್ಳೂರು ಪಂಚಾಯತ್‌ನ 11ನೇ ವಾರ್ಡ್ ನಾಟೆಕಲ್ಲು ನಿವಾಸಿ 48 ವರ್ಷದ ಚಂದ್ರಾವತಿ ಮುಂಚೂಣಿಯಲ್ಲಿದ್ದರು. ಹಸಿರು ಕಾಯ್ದೆಯನ್ನು ಪಾಲಿಸಿ ಕೊಂಡು ಮಾದರಿ ಚುನಾವಣೆ ನಡೆಸಿದ ಬೂತ್ ಆಗಿದೆ ಇದು. ಇಲ್ಲಿ ವಿಭಿನ್ನ ರೀತಿಯಲ್ಲಿ ಪ್ರವೇಶದ್ವಾರವನ್ನು ಅಲಂಕರಿಸಬೇಕು ಎಂಬ ತೀರ್ಮಾನದ ಹಿನ್ನೆಲೆಯಲ್ಲಿ ಚಂದ್ರಾವತಿ ಈ ಪ್ರವೇಶದ್ವಾರದ ಹೊಣೆಗಾರಿಕೆಯನ್ನು ವಹಿಸಿಕೊಂಡಿ ದ್ದರು. ಮೂರು ದಿನದಿಂದ ಏಕಾಂಗಿಯಾಗಿ ಕೆಲಸ ಮಾಡಿ ಈ ಪ್ರವೇಶದ್ವಾರವನ್ನು ಇವರು ಸಿದ್ಧಪಡಿಸಿದ್ದಾರೆ. ತೆಂಗಿನ ಮಡಲು ಉಪಯೋಗಿಸಿ ಕರಕುಶಲ ವಸ್ತುಗಳನ್ನು ನಿರ್ಮಿಸುವುದರಲ್ಲಿ ಚಂದ್ರಾವತಿ ಸಿದ್ಧಹಸ್ತರಾಗಿದ್ದಾರೆ. ತಾಯಿ ಹಾಗೂ ಮೂವರು ಸಹೋದರಿಯರು, ಇಬ್ಬರು ಸಹೋದರರು ಸೇರಿದು ದಾಗಿದೆ ಚಂದ್ರಾವತಿಯ ಕುಟುಂಬ.







