ಕುಂಬಳೆ: ಪೆರುವಾಡ್ ಕಡಪ್ಪುರದಲ್ಲಿ ನಿನ್ನೆ ಮಧ್ಯಾಹ್ನ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಫೈಬರ್ ದೋಣಿ ಹಾಗೂ ಮೀನುಗಾ ರಿಕೆಗೆ ಬಳಸುವ ಬಲೆ ಉರಿದು ನಾಶಗೊಂಡಿದೆ. ಬೆಂಕಿ ಪರಿಸರ ಪ್ರದೇಶದಲ್ಲಿ ಹರಡಿದ್ದು, ಉಪ್ಪಳ ದಿಂದ ತಲುಪಿದ ಅಗ್ನಿಶಾಮಕದಳ, ನಾಗರಿಕರ ಸಹಾಯದೊಂದಿಗೆ ಬೆಂಕಿ ನಂದಿಸಿದೆ.
ನಿನ್ನೆ ಮಧ್ಯಾಹ್ನ 12.30ರ ವೇಳೆ ಘಟನೆ ಸಂಭವಿಸಿದೆ. ಚುನಾವಣೆ ಯಾದುದರಿಂದ ನಿನ್ನೆ ಮೀನು ಕಾರ್ಮಿ ಕರು ಸಮುದ್ರಕ್ಕೆ ತೆರಳದೆ ದೋಣಿಯನ್ನು ಕಡಲ ಕಿನಾರೆಯಲ್ಲಿ ನಿಲ್ಲಿಸಿದರು. ಕಡಲ ಕಿನಾರೆ ಬಳಿಯ ಹಿತ್ತಿಲಲ್ಲಿ ಕಸಕಡ್ಡಿ ರಾಶಿ ಹಾಕಿ ಬೆಂಕಿ ಹಾಕಿದ್ದು, ಇದರಿಂದ ಬೆಂಕಿ ಹರಡಿ ದೋಣಿ ಉರಿದು ನಾಶಗೊಂ ಡಿದೆ ಯೆಂದು ಅಂದಾಜಿಸಲಾಗಿದೆ. ದೋಣಿ ನಾಶಗೊಂಡುದರಿಂದ ಸುಮಾರು ೧೦ ಲಕ್ಷ ರೂಪಾಯಿಗಳ ನಷ್ಟ ಉಂಟಾಗಿದೆಯೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.







