ಕಾಸರಗೋಡು: ಜಿಲ್ಲಾ ಪಂಚಾಯತ್‌ನ ಬದಿಯಡ್ಕ ಡಿವಿಶನ್ ಎಡರಂಗದ ಅಭ್ಯರ್ಥಿ ಸಿಪಿಐಯ ಪ್ರಕಾಶ್ ಕುಂಬ್ಡಾಜೆ ಯವರ ಮನೆ ಮುಂಭಾಗ ನಾಡಬಾಂಬ್ ಪತ್ತೆಹಚ್ಚಿದ ಘಟನೆಯಲ್ಲಿ ನಿಗೂಢತೆಯನ್ನು ಬಯಲಿಗೆಳೆಯಬೇಕೆಂದು ಸಿಪಿಐ ಜಿಲ್ಲಾ ಕೌನ್ಸಿಲ್ ಆಗ್ರಹಿಸಿದೆ. ಮತದಾನ ದಿನವಾದ ನಿನ್ನೆ ಬೆಳಿಗ್ಗೆ ಪ್ರಕಾಶ್ ರೈಯವರ ಮನೆಯ ಸಮೀಪದ ತೋಟದಲ್ಲಿ ಭಾರೀ ಶಬ್ದದೊಂದಿಗೆ ಸ್ಫೋಟ ನಡೆದಿತ್ತು. ಶಬ್ದ ಕೇಳಿ ಜನರು ಸ್ಥಳಕ್ಕೆ ತಲುಪಿ ದಾಗ ಪ್ರಕಾಶ್‌ರ ಸಾಕುನಾಯಿ ಸತ್ತುಬಿದ್ದಿತ್ತು. ಸಮೀಪದಲ್ಲೇ ಇತರ ಮೂರು ಬಾಂಬ್‌ಗಳನ್ನು ಪತ್ತೆ ಹಚ್ಚಲಾಗಿತ್ತು. ಶಂಕೆಗೆ ಹೇತು ವಾದ ಈ ರೀತಿಯ ಘಟನೆಗಳ ವಿರುದ್ಧ ತನಿಖೆ ನಡೆಸಿ ನಿಗೂಢತೆ ಯನ್ನು ಬಯಲಿಗೆಳೆಯಬೇಕೆಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿ.ಪಿ. ಬಾಬು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.







