ದೇಲಂಪಾಡಿ ಪಂ.ನಲ್ಲಿ ಸಿಪಿಎಂ ಅಭ್ಯರ್ಥಿಗಳನ್ನು ಪರಾಭವಗೊಳಿಸಿದ ಬಂಡುಕೋರ ಅಭ್ಯರ್ಥಿಗಳು

ಅಡೂರು: ಸಿಪಿಎಂ ಆಡಳಿತದಲ್ಲಿರುವ ದೇಲಂಪಾಡಿ ಪಂಚಾಯತ್‌ನಲ್ಲಿ ಇಬ್ಬರು ಸಿಪಿಎಂ ಅಭ್ಯರ್ಥಿಗಳನ್ನು ಪಕ್ಷದ ಬಂಡುಕೋರ ಅಭ್ಯರ್ಥಿಗಳು ಪರಾಭವಗೊಳಿಸಿದ್ದಾರೆ. ಫಲಿತಾಂಶ ಪ್ರಕಟಗೊಂಡ ಏಳು ವಾರ್ಡ್‌ಗಳ ಪೈಕಿ 1ನೇ ವಾರ್ಡ್ ಆದ ಊಜಂಪಾಡಿಯಲ್ಲಿ  ಸಿಪಿಎಂ ಬಂಡುಕೋರ ಅಭ್ಯರ್ಥಿ ಐತ್ತಪ್ಪ ನಾಯ್ಕ್ 275 ಮತಗಳ ಅಂತರದಲ್ಲಿ ಸಿಪಿಎಂ ಅಭ್ಯರ್ಥಿಯನ್ನು ಸೋಲಿಸಿದ್ದಾರೆ. 2ನೇ ವಾರ್ಡ್  ದೇಲಂಪಾಡಿಯಲ್ಲಿ ಸಿಪಿಎಂ ಬಂಡುಕೋರನಾಗಿ ಸ್ಪರ್ಧಿಸಿದ ಮುಸ್ತಫ ಹಾಜಿ 177 ಮತಗಳ ಅಂತರದಲ್ಲಿ ಸಿಪಿಎಂ ಅಭ್ಯರ್ಥಿಯನ್ನು ಸೋಲಿಸಿದ್ದಾರೆ. ೩ನೇ ವಾರ್ಡ್  ಬೆಳ್ಳಿಪ್ಪಾಡಿಯಲ್ಲಿ ಬಿಜೆಪಿಯ ಧನಂಜಯ 201 ಮತಗಳ ಹಾಗೂ 4ನೇ ವಾರ್ಡ್ ಆದ ಪರಪ್ಪದಲ್ಲಿ ಲೀಗ್‌ನ ಸೈರ ಎ.ಬಿ. ಬಶೀರ್ 502 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ೫ನೇ ವಾರ್ಡ್ ಆದ  ಪುದಿಯಂಬಲದಲ್ಲಿ ಸಿಪಿಎಂನ ಬಿಂದು 98 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. 7ನೇ ವಾರ್ಡ್ ವೆಳ್ಳಕ್ಕಾನದಲ್ಲಿ ಬಿಜೆಪಿ ಅಭ್ಯರ್ಥಿ ದಿನೇಶ್ 91 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಇತರ ವಾರ್ಡ್‌ಗಳ ಮತ ಎಣಿಕೆ ಮುಂದುವರಿಯುತ್ತಿದೆ.

RELATED NEWS

You cannot copy contents of this page