ಉಪ್ಪಳ: ಉದ್ಯಾವರ ಹತ್ತನೇ ಮೈಲು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ರಾತ್ರಿ ಕಾರು-ಬೈಕ್ ಢಿಕ್ಕಿ ಹೊಡೆದು ಸಂಭವಿಸಿದ ವಾಹನ ಅಪಘಾತದಲ್ಲಿ ಒಬ್ಬರು ಗಂಭೀರ ಗಾಯಗೊಂಡಿದ್ದಾರೆ. ಹೇರೂರು ನಿವಾಸಿ ಮೊಹಮ್ಮದ್ ಅಶ್ರಫ್ (30) ಗಾಯಗೊಂಡಿದ್ದು ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ರಾತ್ರಿ 12.45ರ ವೇಳೆ ಅಪಘಾತವುಂ ಟಾಗಿದೆ. ಮೊಹಮ್ಮದ್ ಅಶ್ರಫ್ ಬೈಕ್ನಲ್ಲಿ ತಲಪಾಡಿ ಭಾಗದಿಂದ ಮಂಜೇಶ್ವರ ಭಾಗಕ್ಕೆ ಬರುತ್ತಿದ್ದ ವೇಳೆ ಮಂಗಳೂರು ಭಾಗಕ್ಕೆ ಶಬರಿಮಲೆ ತೀರ್ಥಾಟಕರು ಸಂಚರಿಸುತ್ತಿದ್ದ ಕಾರು ಢಿಕ್ಕಿ ಹೊಡೆದು ಅಪಘಾತ ಉಂಟಾಗಿದೆ.







