ದೇವರಗುಡ್ಡೆ ಶ್ರೀಶೈಲ ಮಹಾದೇವ ದೇವಸ್ಥಾನದಲ್ಲಿ ಧನುಪೂಜೆ ಆರಂಭ

ಕಾಸರಗೋಡು: ದೇವರಗುಡ್ಡೆ ಶ್ರೀ ಶೈಲ ಮಹಾದೇವ ಸನ್ನಿಧಿಯಲ್ಲಿ ಧನುರ್ಮಾಸ ಪ್ರಯುಕ್ತ ಧನುಪೂಜೆ ನಿನ್ನೆ ಆರಂಭಗೊAಡಿದ್ದು ಜ.14ರ ತನಕ ಜರಗಲಿದೆ. ಪಾರೆಕಟ್ಟೆ ಶ್ರೀ ಮುತ್ತಪ್ಪ ಕ್ಷೇತ್ರದಿಂದ ಭಜನಾ ಸಂಕೀರ್ತನೆಯೊAದಿಗೆ ಶ್ರೀ ಕ್ಷೇತ್ರಕ್ಕೆ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಶ್ರೀ ಮುತ್ತಪ್ಪ ಕ್ಷೇತ್ರದ ಪ್ರಮುಖರು, ಗಣೇಶ ಪಾರಕಟ್ಟೆ, ಕ್ಷೇತ್ರದ ಮಡೆಯನ್ಮಾರ್, ಭಜನಾ ಸಂಘದವರು, ಧನುಪೂಜಾ ಸಮಿತಿಯ ಕೆ.ಎನ್. ವೆಂಕಟ್ರಮಣ ಹೊಳ್ಳ, ಮಹೇಶ, ಸುಭಾಸ್ ಪಾಟಾಳಿ, ಗಣೇಶ ನಾಯ್ಕ, ನಿಶಾಂತ್, ಮಹಾಬಲ ರೈ, ಶ್ರೀನಿವಾಸ ನಾಯ್ಕ, ಕ್ಷೇತ್ರದ ಅರ್ಚಕ ರಾಮ ಭಟ್, ವಸಂತ, ಬಾನುಪ್ರಕಾಶ್, ಗಣೇಶ್ ಭಗವದ್ಭಕ್ತರು ಭಾಗವಹಿಸಿದರು.

RELATED NEWS

You cannot copy contents of this page