ಕುಂಬಳೆ: ದೇಶಿಯ ಅಧ್ಯಾಪಕ ಪರಿಷತ್ ( ಎನ್ ಟಿ ಯು) ಕುಂಬಳೆ ಉಪಜಿಲ್ಲಾ ಸಮ್ಮೇಳನ ನೀರ್ಚಾಲ್ ಮಹಾಜನ ಹೈಯರ್ ಸೆಕೆಂಡರಿ ಶಾಲೆ ಯಲ್ಲಿ ನಡೆಯಿತು. ಕುಂಬಳೆ ಉಪಜಿಲ್ಲಾ ಅಧ್ಯಕ್ಷ ಧ್ವಜಾರೋಹಣ ಗೈದರು. ಬದಿಯಡ್ಕ ಖಂಡ ಚಾಲಕ್ ರಮೇಶ ಕಲರಿ ದೀಪ ಬೆಳಗಿಸಿ ಉದ್ಘಾಟಿಸಿ ದರು. ಶಾಲಾ ಮೇನೇಜರ್ ಜಯದೇವ ಖಂಡಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕುಂಬಳೆ ಉಪಜಿಲ್ಲಾ ಅಧ್ಯಕ್ಷÀ ದಿನೇಶ್ ಕೆ ಅಧ್ಯಕ್ಷತೆ ವಹಿಸಿದರು. ಎನ್ ಟಿ ಯು ರಾಜ್ಯ ಉಪಾಧ್ಯಕ್ಷ ಪ್ರಭಾಕರನ್ ನಾಯರ್ , ರಾಜ್ಯ ಸಮಿತಿ ಸದಸ್ಯ ರಂಜಿತ್, ಜಿಲ್ಲಾ ಖಜಾಂಚಿ ಮಹಾಬಲ ಭಟ್ , ಜಿಲ್ಲಾ ಸಮಿತಿ ಸದಸ್ಯ ಪುರುಷೋತ್ತಮ ಕುಲಾಲ್ ಉಪಸ್ಥಿತರಿದ್ದರು. ಕುಂಬಳೆ ಉಪಜಿಲ್ಲಾ ಕಾರ್ಯದರ್ಶಿ ದಿವ್ಯ ಸ್ವಾಗತಿಸಿ, ಉಪ ಜಿಲ್ಲಾ ಸಮಿತಿ ಸದಸ್ಯೆ ಶ್ಯಾಮಲ ವಂದಿಸಿದರು. ಶಿಕ್ಷಕಿಯರಾದ ಸವಿತ, ಸರಿತ ನಿರೂಪಿಸಿದರು.
ನೂತನ ಉಪಜಿಲ್ಲಾ ಅಧ್ಯಕ್ಷರಾಗಿ ರಾಮಚಂದ್ರ ಪಿ ಕಾರಡ್ಕ, ಕಾರ್ಯದರ್ಶಿ ಯಾಗಿ ರವಿರಾಜ್ ಅಗಲ್ಪಾಡಿ, ಕೋಶಾಧಿಕಾರಿಯಾಗಿ ಪುಷ್ಪ ವಾಣಿನಗರ ಅವರನ್ನು ಆಯ್ಕೆ ಮಾಡಲಾಯಿತು.







