ಬದಿಯಡ್ಕ : ಮುನಿಯೂರು ಮುನಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಇದರ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಾರ್ಚ್ 1ರಿಂದ 9ರ ತನಕ ನಡೆಯಲಿದೆ. ಇದರ ಬ್ರಹ್ಮಕಲಶೋತ್ಸವ ಸಮಿತಿ ರೂಪೀಕರಣ ಮಹಾ ಸಭೆ ಶ್ರೀ ಕ್ಷೇತ್ರದಲ್ಲಿ ಜರಗಿತು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ದೀಪ ಪ್ರಜ್ವಲಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಂಕರ ನಾರಾಯಣ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಹರಿನಾರಾಯಣ ನಡುವಂತಿಲ್ಲಾಯ ಪ್ರಾಸ್ತಾಪಿಸಿದರು. ಧಾರ್ಮಿಕ ಮುಖಂಡರಾದ ಬಿ ವಸಂತ ಪೈ, ಶ್ಯಾಮ್ ಭಟ್ ಏತಡ್ಕ, ಕೃಷ್ಣ ಭಟ್ ಅಜ್ಜಿಮೂಲೆ, ಹರಿನಾರಾ ಯಣ ಶಿರಂತಡ್ಕ, ಡಾ| ವೇಣು ಗೋಪಾಲ ಕಳೆಯತ್ತೋಡಿ, ಶ್ರೀನಿವಾಸ ಅಮ್ಮಣ್ಣಾಯ ಪಾವೂರು, ಪುರುಷೋ ತ್ತಮ ಪುಣಿಂಚಿತ್ತಾಯ, ಚಂದ್ರಶೇಖರ ಭಂಡಾರಿ ಮುನಿಯೂರು, ಎಂ ಸಿ ನಾರಾಯಣ ನಾಯರ್ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಮಧುಸೂಧನ ನಡುವಂತಿಲ್ಲಾಯ ಸ್ವಾಗತಿಸಿ, ಡಿ ಕೆ ನಾರಾಯಣ ನಾಯರ್ ವಂದಿಸಿದರು. ಪ್ರೊ. ಶ್ರೀನಾಥ್ ಕಾರ್ಯಕ್ರಮ ನಿರೂಪಿಸಿದರು.







