ಉಪ್ಪಳ: ಉಪ್ಪಳ ಪಚ್ಲಂಪಾರೆಯಲ್ಲಿ ಉಪ್ಪಳ ಗೇಟ್ ಪಳ್ಳಂ ರೋಡ್ ನ್ಯೂ ಫಾತಿಮಾ ಮಂಜಿಲ್ನ ಮಶ್ಕೂರ್ (27) ಎಂಬಾತನಿಗೆ ಸಿಮೆಂಟ್ ತುಂಡು ಎಸೆದು ತಲೆಗೆ ಗಾಯಗೊಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ದೂರಿನಂತೆ 5 ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಚ್ಲಂಪಾರೆ ನಿವಾಸಿಗಳಾದ ಸೈಲ(23), ಅಮೀರ (27),ಉಸ್ನ (20),ಆಮಿನ (45)ಮತ್ತು ಅವ್ವ (45)ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ.
ಚುನಾವಣಾ ದಿನದಂದು ಬೂತ್ನಲ್ಲಿ ದೂರುದಾರ ಮತ್ತು ಈ ಪ್ರಕರಣದ 1 ಮತ್ತು 2ನೇ ಆರೋಪಿಗಳ ತಂದೆಯೊಂದಿಗೆ ಮತದಾನದ ವಿಷಯದಲ್ಲಿ ವಾಗ್ವಾದ ನಡೆದಿತ್ತೆಂ ದೂ, ಆ ದ್ವೇಷದಿಂದ ಆರೋಪಿಗಳು ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ದೂರುದಾರ ಮಶ್ಕೂರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.







