ಬದಿಯಡ್ಕ: ಸ್ಥಳೀಯಾಡಳಿತ ಚುನಾವಣೆಯಲ್ಲಿ ಎಡರಂಗ ಅಭ್ಯರ್ಥಿಗೆ ಸಹಾಯವೊದಗಿಸಿದ ದ್ವೇಷದಿಂದ ಕಾರು ತಡೆದು ನಿಲ್ಲಿಸಿ ಯುವಕನ ಮುಖಕ್ಕೆ ಉಗುಳಿ ಕೊಲೆ ಬೆದರಿಕೆಯೊಡ್ಡಿರುವುದಾಗಿ ದೂರ ಲಾಗಿದೆ. ಕುಂಬ್ಡಾಜೆಯ ಫಾರೂಕ್ (43) ನೀಡಿದ ದೂರಿನಂತೆ ಮುಹಮ್ಮದ್ ಸಿಯಾಬುದ್ದೀನ್ ಎಂಬಾತನ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ. ಆದಿತ್ಯವಾರ ರಾತ್ರಿ 7.30ರ ವೇಳೆ ಕುಂಬ್ಡಾಜೆ ಸಿ.ಎಚ್ ನಗರದಲ್ಲಿ ಘಟನೆ ನಡೆದಿರುವುದಾಗಿ ದೂರ ಲಾಗಿದೆ. ಸ್ಥಳೀಯಾಡಳಿತ ಚುನಾ ವಣೆಯಲ್ಲಿ ಎಲ್ಡಿಎಫ್ ಅಭ್ಯ ರ್ಥಿಯಾಗಿ ಸ್ಪರ್ಧಿಸಿದ ಕಂಡಕ್ಟರ್ ಮೊಯ್ದೀನ್ ಎಂಬವರಿಗೆ ಫಾರೂಕ್ ಸಹಾಯ ಒದಗಿಸಿದ ದ್ವೇಷದಿಂದ ಆರೋಪಿ ಈ ಕೃತ್ಯವೆಸಗಿ ರುವುದಾಗಿ ಪೊಲೀಸರು ದಾಖಲಿಸಿ ಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.







