ಕಾಸರಗೋಡು: ಕೇರಳ ರೆವೆನ್ಯೂ ಡಿಪಾರ್ಟ್ಮೆಂಟ್ ಸ್ಟಾಫ್ ಅಸೋಸಿಯೇಶನ್ (ಕೆಆರ್ಡಿಎಸ್ಎ) ಜಿಲ್ಲಾ ಸಮ್ಮೇಳನ ವಿದ್ಯಾನಗರ ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಸಭಾಂಗಣದಲ್ಲಿ ನಿನ್ನೆ ಆರಂಭಗೊಂಡಿದ್ದು, ಇಂದು ಕಾಸರಗೋಡು ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಸಮಾಪ್ತಿಗೊಳ್ಳಲಿದೆ. ನಿನ್ನೆ ನಡೆದ ಸಾಂಸ್ಕೃತಿಕ ಸಮ್ಮೇಳನವನ್ನು ಜೋ ಯಿಂಟ್ ಕೌನ್ಸಿಲ್ ರಾಜ್ಯ ಕಾರ್ಯ ದರ್ಶಿ ನರೇಶ್ ಕುಮಾರ್ ಕುಣಿಯೂರು ಉದ್ಘಾಟಿಸಿದರು. ರಾಜ್ಯ ಮಹಿಳಾ ಸಮಿತಿ ಸದಸ್ಯೆ ಆಮಿನ ಅಧ್ಯಕ್ಷತೆ ವಹಿಸಿದರು. ಪತ್ರಕರ್ತ ರವೀಂದ್ರನ್ ರಾವಣೀಶ್ವರಂ ಪ್ರಧಾನ ಭಾಷಣ ಮಾಡಿದರು. ಪ್ರಸಾದ್ ಕರುವಳಂ ಮಾತನಾಡಿದರು. ಲಿತಿನ್ ಪಿ.ವಿ., ಜಯಜಿತ್ ಕೆ.ಎ. ಉಪಸ್ಥಿತರಿದ್ದರು.







