ಮೀಂಜ: ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲಾ ಅಭ್ಯರ್ಥಿಗಳನ್ನು ಬಿಜೆಪಿ ಮೀಂಜ ಪಂಚಾಯತ್ ಸಮಿತಿ ಆಶ್ರಯದಲ್ಲಿ ಅಭಿನಂದಿಸಲಾಯಿತು. ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಉದ್ಘಾಟಿಸಿದರು. ಮಂಜೇಶ್ವರ ಬ್ಲೋಕ್ನ ಕೆಲವು ವಾರ್ಡ್ಗಳಲ್ಲಿ ಬಿಜೆಪಿಯನ್ನು ಸೋಲಿಸಲು ಎಡ-ಬಲ ಒಕ್ಕೂಟಗಳು ಪ್ರತ್ಯಕ್ಷ ಹೊಂದಾಣಿಕೆ ನಡೆಸಿರುವುದಕ್ಕೆ ಪುರಾವೆಯಾಗಿದೆ ಈ ಬಾರಿಯ ಚುನಾವಣೆಯ ಫಲಿತಾಂಶವೆಂದು ಅಶ್ವಿನಿ ಆರೋಪಿಸಿದರು.
ಕೇಂದ್ರ ಸರಕಾರದ ಜನಕ್ಷೇಮ ಯೋಜನೆಗಳ ಪ್ರಯೋಜನ ಗರಿಷ್ಠವಾಗಿ ಗ್ರಾಹಕರಿಗೆ ಲಭ್ಯಗೊಳಿಸಲು ಹೊಸತಾಗಿ ಆಯ್ಕೆಯಾದ ಜನಪ್ರತಿನಿಧಿಗಳು ಗಮನ ಹರಿಸಬೇಕೆಂದು ಅಶ್ವಿನಿ ಕರೆ ನೀಡಿದರು. ಮೀಜ ಪಂಚಾಯತ್ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಎನ್. ಮಧು, ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ., ಸತ್ಯಶಂಕರ ಭಟ್, ಪದ್ಮನಾಭ ಮಾತನಾಡಿದರು.







