ಉಬ್ರಂಗಳ: ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾ ನದಲ್ಲಿ ಪಾಟು ಉತ್ಸವ, ಭೂತಬಲಿ ಉತ್ಸವದ ಪ್ರಯುಕ್ತ ಡಾ.ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಸಾಹಿತ್ಯಾಮೃತ ಸಾಂಸ್ಕೃ ತಿಕ ಕಾರ್ಯಕ್ರಮ ಜರಗಿತು. ಡಾ. ವಾಣಿಶ್ರೀ ಪ್ರಸ್ತುತ ಪಡಿಸಿದರು. ಗಾನಾಮೃತ ಕಾರ್ಯಕ್ರಮ ದಲ್ಲಿ ಸಂಸ್ಥೆಯ ಮಧುಲತಾ ಪುತ್ತೂರು, ವಿಶ್ವನಾಥ ಪುತ್ತಿಗೆ, ರತ್ನಾಕರ ಒಡಂಗಲ್ಲು, ಮುರಳಿ ನೀರ್ಚಾಲ್, ಈಶ್ವರ ಸೂರಂಬೈಲ್ ಮುಂತಾದ ಕಲಾವಿದರು ಹಾಡಿ ರಂಜಿಸಿದರು. ಕಲಾವಿದರಿಗೆ ಸಂಸ್ಥೆಯ ವತಿಯಿಂದ ಗೌರವ ಸ್ಮರಣಿಕೆ, ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು. ಹಲವರು ಉಪ ಸ್ಥಿತರಿದ್ದರು. ಗಣ್ಯರಾದ ಜಯರಾಜ್ ಕುಣಿಕುಳ್ಳಾಯ, ಕಿರಣ್ ಕುಣಿಕು ಳ್ಳಾಯ, ರಾಜೇಶ್ ಮಾಸ್ತರ್ ಉಬ್ರಂಗಳ, ಸುಬ್ರಹ್ಮಣ್ಯ ಮಾಸ್ತರ್, ಅಚ್ಯುತ ಭಟ್, ರಾಜೇಶ್, ಮಧುಮತಿ, ರಾಜೇಶ್ ಶಡ್ರಂಪಾಡಿ, ರವಿ ಕುರುಪ್ ಉಬ್ರಂಗಳ ಉಪಸ್ಥಿತರಿದ್ದರು.







